ರಬ್ಬರ್ ಟ್ಯಾಪಿಂಗ್ ಕಾರ್ಮಿಕ ನೇಣು ಬಿಗಿದು ಸಾವು
ಕಾಸರಗೋಡು: ರಬ್ಬರ್ ಟ್ಯಾಪಿಂಗ್ ಕಾರ್ಮಿಕನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಚಿಟ್ಟಾರಿಕಲ್ ಆಯನ್ನೂರ್ನಲ್ಲಿ ಟ್ಯಾಪಿಂಗ್ ನಡೆಸುತ್ತಿದ್ದು ಪತ್ತನಂತಿಟ್ಟ ಪುಲಿಕ್ಕುಳಿ ತೆಕ್ಕೇಕರದ ಚಂದ್ರಬಾಬು (50) ಸಾವಿಗೀಡಾದ ವ್ಯಕ್ತಿ. ಇವರು ಪೆರಿಂಗೋ ಞೆಕ್ಲಿಯಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ಮಾಧವಿ, ಮಕ್ಕಳಾದ ಮನೀಶ್, ನಿಮಿಷ, ಅಳಿಯಂದಿರಾದ ರತೀಶ್, ರಜೀಶ್ ಎಂಬಿವರನ್ನು ಅಗಲಿದ್ದಾರೆ.
ತೋಟದ ಶೆಡ್ನಿಂದ ಮೋಟಾರ್ ಕಳವು
ಬದಿಯಡ್ಕ: ತೋಟದ ಶೆಡ್ನಲ್ಲಿ ರಿಸಿದ್ದ ಮೋಟಾರ್ ಪಂಪು ಕಳವಿಗೀಡಾದ ಬಗ್ಗೆ ದೂರಲಾಗಿದೆ. ಪಳ್ಳತ್ತಡ್ಕ ನಿವಾಸಿ ಮೊಹಮ್ಮದ್ ಕುಂಞಿಯವರ ಕಂಗಿನ ತೋಟದ ಶೆಡ್ನಿಂದ 7.5 ಎಚ್ಪಿಯ ಮೋಟಾರ್ ಕಳವಿಗೀಡಾಗಿದೆ. ಮಳೆ ಕೊನೆಗೊಂಡ ಬಳಿಕ ಮೋಟಾರ್ ಕಳಚಿ ಶೆಡ್ನಲ್ಲಿರಿಸಲಾಗಿತ್ತು. ಅದು ಕಳವಿಗೀಡಾದ ಬಗ್ಗೆ ಈಗ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಮೊಹಮ್ಮದ್ ಕುಂಞಿಯವರ ಸಹೋದರ ಬದ್ರುದ್ದೀನ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.