ರಬ್ಬರ್ ಶೀಟ್ ಸಂಗ್ರಹದ ಶೆಡ್ ಬೆಂಕಿಗಾಹುತಿ: ನಾಶ ನಷ್ಟ
ಉಪ್ಪಳ: ರಬ್ಬರ್ ಶೀಟ್ ಸಂಗ್ರಹದ ಶೆಡ್ಡ್ ಬೆಂಕಿ ಗಾಹುತಿಯಾಗಿ ಭಾರೀ ಮೊತ್ತದ ನಾಶ ನಷ್ಟ ಉಂಟಾದ ಘಟನೆ ನಡೆದಿದೆ. ವರ್ಕಾಡಿ ಕೊಡ್ಲಮೊಗರು ಎಂಬಲ್ಲಿ ನಿನ್ನೆ ಬೆಳಿಗ್ಗೆ ಘಟನೆ ನಡೆದಿದೆ. ಪ್ರಕಾಶ ಎಂಬವರ ರಬ್ಬರ್ ತೋಟದಲ್ಲಿರುವ ಶೀಟ್ ಹೊದಿಸಿದ ಶೆಡ್ಡ್ ಬೆಂಕಿಗಾಹುತಿಯಾಗಿರುವುದಾಗಿ ತಿಳಿದು ಬಂದಿದೆ. ಸುಮಾರು ಎರಡು ಲಕ್ಷ ರೂ ನಷ್ಟ ಅಂದಾಜಿಸಲಾಗಿದೆ. ಕಾರ್ಮಿಕರು ರಬ್ಬರ್ ಶೀಟ್ ಒಣಗಿಸುತ್ತಿದ್ದ ವೇಳೆ ಒಲೆಯಿಂದ ಬೆಂಕಿ ಆಕಸ್ಮಾತ್ ಶೆಡ್ಡ್ಗೆ ತಗಲಿ ಉರಿದಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಉಪ್ಪಳ ಅಗ್ನಿ ಶಾಮಕ ದಳದ ಅಧಿಕಾರಿ ವಿಜೇಶ್ ನೇತೃತದಲ್ಲಿ ತಲುಪಿ ಬೆಂಕಿಯನ್ನು ನಂದಿಸಿದ್ದಾರೆ.