ರಸ್ತೆಗೆ ಆವರಿಸಿಕೊಂಡಿರುವ ಪೊದೆಗಳು ವಾಹನ ಸವಾರರಲ್ಲಿ ಆತಂಕ
ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಬಾಯಾರುಪದವು-ಧರ್ಮತ್ತಡ್ಕ, ಸರ್ಕುತ್ತಿ ಕನಿಯಾಲ, ಬಳ್ಳೂರು ರಸ್ತೆಗಳ ವಿವಿಧೆಡೆ ಇಕ್ಕೆಡೆಗಳಲ್ಲಿ ಮರದ ರೆಂಬೆ ಹಾಗೂ ಪೊದೆಗಳು ರಸ್ತೆಗೆ ಆವರಿಸಿ ಬಸ್ ಸಹಿತ ವಾಹನ ಸಂಚಾರಕ್ಕೆ ಆತಂಕ ಉಂಟಾಗುತ್ತಿರುವುದಾಗಿ ವಾಹನ ಸವಾರರು ದೂರಿದ್ದಾರೆ. ದಿನನಿತ್ಯ ಬಸ್ ಸಹಿತ ನೂರಾರು ವಾಹನಗಳು ಸಂಚಾರ ನಡೆಸುತ್ತಿದೆ. ಎದುರಿನಿಂದ ಬರುವ ವಾಹನಗಳಿಗೆ ಸೈಡು ನೀಡಲು ಪೊದೆಗಳು ಅಡ್ಡಿ ಉಂಟಾಗುತ್ತಿದ್ದು, ಕೆಲವು ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಬೃಹತ್ ಹೊಂಡವಿದ್ದು ಅಪಾಯಕ್ಕೆ ಕಾರಣವಾಗುತ್ತಿರುವುದಾಗಿ ಸವಾರರು ತಿಳಿಸಿದ್ದಾರೆ. ಸರ್ಕುತ್ತಿ ಕನಿಯಾಲ ಮಧ್ಯೆ ಕೆಲವು ಕಡೆಗಳಲ್ಲಿ ಸ್ಥಳಿಯರು ಸೇರಿ ಪೊದೆಗಳನ್ನು ಕಡಿದು ಶುಚೀಕರಣಗೊಳಿಸಿದ್ದಾರೆ. ಇನ್ನೂ ಬಾಕಿಯಿರುವ ಪೊದೆಗಳನ್ನು ಸಂಬAಧಪಟ್ಟವರು ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮವಾಗಿಸಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.