ರಸ್ತೆ ಬದಿ ಹೊಂಡ: ದುರಸ್ತಿಗೆ ಕ್ರಮವಿಲ್ಲ : ಎರಡು ವಾರಗಳಲ್ಲಿ ಹಲವರು ಬಿದ್ದು ಗಾಯ
ಕುಂಬಳೆ: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆ ಬದಿ ಸೃಷ್ಟಿಯಾದ ಹೊಂಡ ದುರಸ್ತಿಗೆ ಇನ್ನೂ ಕ್ರಮ ಉಂಟಾಗಿಲ್ಲ. ಇದರ ಫಲವಾಗಿ ಕಳೆದೆರಡು ವಾರಗಳಿಂದ ಈ ಹೊಂಡಕ್ಕೆ ಹಲವರು ಬಿದ್ದು ಗಾಯಗೊಂಡಿದ್ದಾರೆ. ಕುಂಬಳೆ ಬದರ್ ಜುಮಾ ಮಸೀದಿ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಯ ಸರ್ವೀಸ್ ರಸ್ತೆಯಲ್ಲಿ ಎರಡು ವಾರಗಳ ಹಿಂದೆ ವಾಹನವೊಂದು ಕೆಟ್ಟು ನಿಂತಿತ್ತು. ಈ ವೇಳೆ ಬಂದ ಲಾರಿಯೊಂದು ರಸ್ತೆ ಬದಿಯ ಚರಂಡಿ ಮೂಲಕ ಸಂಚರಿಸಿದ್ದು, ಈ ವೇಳೆ ಚರಂಡಿಯ ಸ್ಲ್ಯಾಬ್ ಕುಸಿದು ಅಲ್ಲಿ ಹೊಂಡ ಸೃಷ್ಟಿಯಾಗಿತ್ತು. ಎರಡು ವಾರಗಳಾದರೂ ಚರಂಡಿಗೆ ಸ್ಲ್ಯಾಬ್ ಅಳವಡಿಸಿ ಹೊಂಡ ಮುಚ್ಚಲು ಕ್ರಮ ಉಂಟಾಗಿಲ್ಲ. ಚರಂಡಿ ಪಂಚಾಯತ್‌ನ ಅಧೀನತೆಯಲ್ಲಿದೆಯೆನ್ನಲಾಗುತ್ತಿದೆ. ಇದರಿಂದ ಪಂಚಾಯತ್ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಅದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪೆನಿಯ ಜವಾಬ್ದಾರಿಯಾಗಿದೆ ಎಂದು ತಿಳಿಸಲಾಗುತ್ತಿದೆ. ಈ ತರ್ಕದಿಂದ ಹೊಂಡ ಹಾಗೆಯೇ ಉಳಿದುಕೊಂಡಿದೆ.
ರೈಲು ನಿಲ್ದಾಣಕ್ಕೆ ಹೋಗುವ, ಬರುವವರು ಈ ಹೊಂಡವನ್ನು ದಾಟಿ ಹೋಗಬೇಕಾ ಗುತ್ತಿದೆ. ಆದರೆ ರಾತ್ರಿ ವೇಳೆ ಹೊಂಡ ಗಮನಕ್ಕೆ ಬಾರದೆ ಈಗಾಗಲೇ ಹಲವರು ಅದಕ್ಕೆ ಬಿದ್ದು ಗಾಯಗೊಂ ಡಿದ್ದಾರೆ. ಮಾತ್ರವಲ್ಲದೆ ಪೇಟೆಯ ಮಲಿನಜಲವೂ ಈ ಹೊಂಡದಲ್ಲಿ ತುಂಬಿಕೊಂಡಿದ್ದು, ಇದರ ದುರ್ನಾತವೂ ಬೀರುತ್ತಿದೆ. ಈ ಹೊಂಡವನ್ನು ದುರಸ್ತಿಗೊಳಿಸಬೇ ಕಾದರೆ ಇನ್ನಷ್ಟು ಮಂದಿ ಬಳಬೇಕು ಎಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ.