ರಸ್ತೆ ಸ್ಥಿತಿ ಶೋಚನೀಯ: ಅಧಿಕಾರಿಗಳ ಅನಾಸ್ಥೆ ವಿರುದ್ಧ ಸ್ಥಳೀಯರಿಂದ ಪಂ. ಕಾರ್ಯದರ್ಶಿಗೆ ದಿಗ್ಬಂಧನ
ಬೆದ್ರಡ್ಕ: ಮೈಲ್ಪಾರ, ಉಜಿರೆಕೆರೆ ರಸ್ತೆ ಕಳೆದ ೧೦ ವರ್ಷದಿಂದ ಶೋಚನೀಯಾವಸ್ಥೆಯಲ್ಲಿದ್ದು, ದುರಸ್ತಿ ನಡೆಸಲು ನಿರಂತರ ಆಗ್ರಹಿಸಿಯೂ ಫಲಕಾಣದ ಹಿನ್ನೆಲೆಯಲ್ಲಿ ಸ್ಥಳೀಯರು ಕ್ರಿಯಾ ಸಮಿತಿ ರೂಪೀಕರಿಸಿ ಹೋರಾಟಕ್ಕಿಳಿದರು. ಇದರಂತೆ ಜನಪರ ಮುಷ್ಕರ ಸಮಿತಿ ನೇತೃತ್ವದಲ್ಲಿ ಮೊಗ್ರಾಲ್ ಪುತ್ತೂರು ಪಂಚಾಯತ್ ಕಾರ್ಯದರ್ಶಿಯನ್ನು ದಿಗ್ಬಂಧನಗೊಳಿಸಲಾಯಿತು. ಬೆಳಿಗ್ಗೆ ೧೧ರಿಂದ ಸಂಜೆ ೩ ಗಂಟೆವರೆಗೆ ದಿಗ್ಬಂಧನ ಮುಂದುವರಿದಿತ್ತು.
ಬಳಿಕ ನಡೆದ ಮಾತುಕತೆಯಲ್ಲಿ ಮುಂದಿನ ೧೮ರಂದು ರಸ್ತೆ
ದುರಸ್ತಿ ಕಾಮಗಾರಿ ಆರಂ ಭಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಖದೀಜ ಕಲ್ಲಂಗಡಿ, ಶಾಲಿಟೀಚರ್, ಲಲಿತಾ, ಪ್ರಿಯ, ಶೋಭಿತ, ಗಂಗಾ ಸುಮಿತ, ಸುಶೀಲ, ಪ್ರಮೀಳಾ ಮಜಲ್, ಗಿರೀಶ್, ರಿಯಾಸ್, ಸಲೀಂ, ಅನ್ವರ್, ರಹೀಂ ನೇತೃತ್ವ ನೀಡಿದರು.