ರಾಜ್ಮೋಹನ್ ಉಣ್ಣಿತ್ತಾನ್ರಿಂದ ವಿವಿಧೆಡೆ ಮತಯಾಚನೆ
ಕಾಸರಗೋಡು: ಲೋಕಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ರಾಜ್ಮೋಹನ್ ಉಣ್ಣಿತ್ತಾನ್ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ಕಡೆಗಳಲ್ಲಿ ಮತಯಾಚನೆ ಗೈದರು. ಹೊಸಂಗಡಿ, ಪೆರ್ಲ, ಸೀತಾಂ ಗೋಳಿ, ಕುಂಬಳೆ, ಮಜೀರ್ಪಳ್ಳ, ಮೀಯಪದವು, ಪೈವಳಿಕೆನಗರ, ಉಪ್ಪಳಗಳಲ್ಲಿ ರೋಡ್ಶೋ ಹಾಗೂ ಮತ ಯಾಚನೆ ನಡೆಸಿದರು. ಈ ವೇಳೆ ಮುಖಂಡರಾದ ಸಿಟಿ ಅಹಮ್ಮದಾಲಿ, ಎಕೆಎಂ ಅಶ್ರಫ್, ಕಮಲಾಕ್ಷ ಕೆ, ಶಮೀನಾ ಟೀಚರ್ ಸೋಮಶೇಖರ ಜೆ.ಎಸ್, ತಾಹಿರಾ ಕಲ್ಲಟ್ರ ಮಾಹಿನ್ ಹಾಜಿ, ಅಜೀಜ್ ಮರಿಕ್ಕೆ, ಸುಂದರ ಆರಿಕ್ಕಾಡಿ, ಹರ್ಷಾದ್ ವರ್ಕಾಡಿ, ಮಂಜುನಾಥ ಆಳ್ವ, ಲೋಕನಾಥ ಶೆಟ್ಟಿ, ಡಿಎಂಕೆ ಮೊಹಮ್ಮದ್, ಸೈಫುಲ್ಲಾ ತಂಙಳ್, ಜುನೈದ್ ಉರ್ಮಿ, ದಾಮೋದರ ಮಾಸ್ತರ್, ನಾಸರ್ ಮೊಗ್ರಾಲ್, ಬಿ.ಎಂ. ಮುಸ್ತಫ, ರವಿ ಪೂಜಾರಿ, ಬಾಬು ಬಂದ್ಯೋಡು, ಶಾನಿದ್ ಕಯ್ಯಾಂಕೂಡಲ್, ಬಿ.ಎನ್. ಗಾಂಭೀರ್, ಮನ್ಸೂರ್ ಬಿ.ಎಂ., ಸುಲೈಮಾನ್ ಊಜಂಪದವು ಉಪಸ್ಥಿತರಿದ್ದರು.