ರಾಜ್‌ಮೋಹನ್ ಉಣ್ಣಿತ್ತಾನ್‌ರಿಗೆ ನೀತಿ ಸಂಹಿತೆ ಉಲ್ಲಂಘನೆ ನೋಟೀಸು

ಕಾಸರಗೋಡು:  ಐಕ್ಯರಂಗ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್‌ರಿಗೆ ಮತ್ತೆ ವಿವರಣೆ ನೀಡಲು ನೋಟೀಸು ನೀಡಲಾಗಿದ. ಮತದಾರರಿಗೆ ಬೂತ್‌ಗಳಿಗೆ ತಲುಪುವುದಕ್ಕಾಗಿ ಉಚಿತವಾಗಿ ವಾಹನ ಏರ್ಪಡಿಸಲಾಗಿದೆಯೆಂಬ ಸೂಚನೆಯನ್ನು ಪ್ರಕಟಗೊಳಿಸಿರುವುದಕ್ಕೆ ನೋಟೀಸು ನೀಡಲಾಗಿದೆ. ಮಾದರಿ ನೀತಿ ಸಂಹಿತೆ ಇಲಾಖೆ ನೋಡಲ್ ಅಧಿಕಾರಿ ಸೂಫಿಯಾನ್ ಅಹಮ್ಮದ್ ನೀಡಿದ ನೋಟೀಸ್‌ನಲ್ಲಿ ಉಣ್ಣಿತ್ತಾನ್‌ರಲ್ಲಿ ೪೮ ಗಂಟೆಗಳಳಗೆ ವಿವರಣೆ ಆಗ್ರಹಿಸಲಾಗಿದೆ.

ಭಕ್ತರಲ್ಲಿ ಇಂತದೇ ಅಭ್ಯರ್ಥಿಗೆ ಮತ ನೀಡಬೇಕೆಂದು ಆಹ್ವಾನ ನೀಡಿದರೆಂಬ ದೂರಿನಂತೆ  ಓರ್ವ ಉಸ್ತಾದ್‌ರಿಗೂ ನೋಟೀಸು ನೀಡಲಾಗಿದೆ. ತೃಕರಿಪುರ ಎಳಂಬಚ್ಚಿ  ಮೊಟ್ಟಮ್ಮಲ್ ಜುಮಾ ಮಸೀದಿಯ ಹಾಫಿಳ್ ಅಯ್ಯುಬ್ ದಾರಿಮಿಗೆ ಸಿ. ವಿಜಿಲ್ ಆಪ್‌ನಲ್ಲಿ ಲಭಿಸಿದ ದೂರಿನಂತೆ ನೋಟೀಸು ನೀಡಲಾಗಿದೆ. ಚುನಾವಣೆ  ಆಂಟಿ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ ಆಡಿಯೋ ಕ್ಲಿಪ್ ಸಹಿತ ಪುರಾವೆ ಹಾಜರುಪಡಿಸಿತ್ತು.

You cannot copy contents of this page