ರಾಜ್ಯದಲ್ಲಿ ಅತೀ ಹೆಚ್ಚು ಸ್ಮಾರ್ಟ್ ಅಂಗನವಾಡಿಗಳಿರುವ ಜಿಲ್ಲೆ ಕಾಸರಗೋಡು
ಕಾಸರಗೋಡು: ಸ್ಮಾರ್ಟ್ ಅಂಗನವಾಡಿ ಕಟ್ಟಡ ನಿರ್ಮಾಣ ಯೋಜನೆ ಪ್ರಕಾರ ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ೫೭ ಅಂಗನ ವಾಡಿಗಳನ್ನು ಸ್ಮಾರ್ಟ್ ಅಂಗನ ವಾಡಿಗಳಾಗಿ ಭಡ್ತಿಗೊಳಿಸಲಾಗಿದೆ. ಇನ್ನು ೧೩೬ ಸ್ಥಳಗಳಲ್ಲಿ ಸ್ಮಾರ್ಟ್ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕೆಲಸಗಳು ಈಗ ನಡೆಯುತ್ತಿವೆ. ರಾಜ್ಯದಲ್ಲಿ ಅತೀ ಹೆಚ್ಚು ಸ್ಮಾರ್ಟ್ ಅಂಗನವಾಡಿಗಳಿರುವ ಜಿಲ್ಲೆ ಕಾಸರ ಗೋಡು ಆಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ೩೦ ಅಂಗನವಾಡಿ ಗಳನ್ನು ಸ್ಮಾರ್ಟ್ ಅಂಗನವಾಡಿಗಳಾಗಿ ಭಡ್ತಿಗೊಳಿ ಸಲಾಗಿದೆ. ಉಳಿದಂತೆ ತಿರುವನಂತಪುರ ಜಿಲ್ಲೆಯಲ್ಲಿ ೧೮, ಕೊಲ್ಲಂ-೨೦, ಪತ್ತನಂತಿಟ್ಟ-೭, ಆಲಪ್ಪುಳ-೧೬, ಕೋಟ್ಟಯಂ-೧೧, ಇಡುಕ್ಕಿ-೧, ಎರ್ನಾಕುಳಂ-೪, ತೃಶೂರು-೧೫, ಪಾಲ್ಘಾಟ್-೧೩, ಕಲ್ಲಿಕೋಟೆ-೧೨, ವಯನಾಡು-೯, ಮಲಪ್ಪುರ-೨೦ ಮತ್ತು ಕಣ್ಣೂರು ಜಿಲ್ಲೆಯಲ್ಲಿ ೧೭ ಸ್ಮಾರ್ಟ್ ಅಂಗನವಾಡಿಗಳಿವೆ. ಅರ್ಜಿಗಳು ಲಭಿಸುವುದಕ್ಕೆ ಹೊಂದಿಕೊಂಡು ಅಂಗನವಾಡಿಗಳನ್ನು ಸ್ಮಾರ್ಟ್ ಆಗಿಸುವ ಅಗತ್ಯದ ಕ್ರಮ ಕೈಗೊಳ್ಳಲಾಗುತ್ತಿದೆಯೆಂದು ರಾಜ್ಯ ಮಹಿಳಾ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.