ರಾಜ್ಯದಲ್ಲಿ ಬೃಹತ್ ಅಣೆಕಟ್ಟು ಇಲ್ಲದ ಏಕ ಜಿಲ್ಲೆ ಕಾಸರಗೋಡು
ಕಾಸರಗೋಡು: ರಾಜ್ಯದಲ್ಲಿ ಬೃಹತ್ ಅಣೆಕಟ್ಟು ಇಲ್ಲದ ಏಕೈಕ ಜಿಲ್ಲೆ ಕಾಸರಗೋಡು ಆಗಿದೆ. ಕಾಸರಗೋಡು ಜಿಲ್ಲೆ ರೂಪುಗೊಂಡು ಇಂದಿಗೆ ೪೦ ವರ್ಷಗಳು ಸಂದಿವೆ. ಕಣ್ಣೂರು ಜಿಲ್ಲೆಯಲ್ಲಿರುವ ಪಳಶ್ಶಿ ಅಣೆಕಟ್ಟು ಮಾದರಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲೂ ದೊಡ್ಡ ಅಣೆಕಟ್ಟು ನಿರ್ಮಿಸಿದ್ದಲ್ಲಿ ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ತಲೆದೋರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬ ಹುದು ಎಂದು ಹವಾಮಾನ ಇಲಾಖೆಯ ತಜ್ಞರು ಹೇಳುತ್ತಿದ್ದಾರೆ.
ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಹೊಳೆಗಳು ಮತ್ತು ಅತೀ ಹೆಚ್ಚು ಮಳೆ ಲಭಿಸುವ ಜಿಲ್ಲೆಯಾಗಿದೆ ಕಾಸರ ಗೋಡು. ಇಲ್ಲಿ ಲಭಿಸುವ ಮಳೆ ನೀರ ನ್ನು ತಡೆಗಟ್ಟಿ ಅದನ್ನು ಕೃಷಿ ಇತ್ಯಾದಿ ಅಗತ್ಯಗಳಿಗೆ ಬಳಸಲು ಹೊಳೆಗಳಿಗೆ ಅಗತ್ಯದಷ್ಟು ಅಣೆಕಟ್ಟು ನಿರ್ಮಿಸ ಬೇಕಾಗಿದೆ. ಹಾಗೆ ನಡೆದಲ್ಲಿ ಹೊಳೆ ನೀರು ಉಪಯೋ ಗಶೂನ್ಯವಾಗಿ ಸಮುದ್ರ ಸೇರುವುದನ್ನು ತಪ್ಪಿಸಿ ಅದನ್ನು ವಿವಿಧ ಅಗತ್ಯಗಳಿಗಾಗಿ ಉಪಯೋಗಿಸ ಬಹುದಾಗಿದೆ. ದೊಡ್ಡ ಅಣೆಕಟ್ಟಿನ ಬದಲು ಜಿಲ್ಲೆಯ ಮೂನಾಂ ಕಡವಿನಲ್ಲಿ ಕನಿಷ್ಟ ಒಂದು ಮಿನಿ ಅಣೆಕಟ್ಟನ್ನಾದರೂ ನಿರ್ಮಿಸಿ ದ್ದಲ್ಲಿ ಮುಂದಿನ ವರ್ಷಗಳಲ್ಲಿ ತಲೆದೋರ ಬಹುದಾಗಿರುವ ನೀರಿನ ಕ್ಷಾಮಕ್ಕೆ ಪರಿಹಾರ ಕಂಡುಕೊಳ್ಳಲು ಅಲ್ಪವಾ ದರೂ ಸಾಧ್ಯವೆಂದೂ ತಜ್ಞರು ಹೇಳು ತ್ತಿದ್ದಾರೆ. ಇದು ಸರಕಾರ ಸಕಾರಾತ್ಮಕವಾಗಿ ಪರಿಗಣಿಸಬೇಕಾದ ವಿಷಯವೂ ಆಗಿದೆ ಎಂದು ಅವರು ಹೇಳಿದ್ದಾರೆ.