ರಾಜ್ಯದ ಎಡರಂಗ ಸರಕಾರ ದುರಂತವನ್ನು ಬಯಸುತ್ತಿದೆ-ಕಾಂಗ್ರೆಸ್ ಆರೋಪ
ಮಂಜೇಶ್ವರ: ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರ ರಾಜ್ಯದಲ್ಲಿ ದುರಂತವನ್ನು ನಿರೀಕ್ಷಿಸುತ್ತ ಕಾಲ ಕಳೆಯುತ್ತಿದ್ದು, ಈ ಹೊಣೆಗೇಡಿ ಸರಕಾರ ಭಾರತದ ಕೊನೆಯ ಎಡರಂಗ ಸರಕಾರ ಎಂದು ಪರಿಗಣಿಸಲ್ಪಡಲಿದೆಯೆಂದು ಕೆಪಿಸಿಸಿ ಕಾರ್ಯದರ್ಶಿ ಸುಬ್ಬಯ್ಯ ರೈ ನುಡಿದರು. ರಾಜ್ಯದ ಎಡರಂಗ ಸರಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡ ಆಂದೋಲನದಂಗವಾಗಿ ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಆಶ್ರಯದಲ್ಲಿ ನಡೆದ ಪ್ರತಿಭಟನಾ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಾಫಿಯಾಗಳಿಗೆ ಒತ್ತಾಸೆ ನೀಡುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದರು.
ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿ.ಎಂ.ಕೆ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಉಮ್ಮರ್ ಬೋರ್ಕಳ, ಹರ್ಷಾದ್ ವರ್ಕಾಡಿ, ಕಮಲಾಕ್ಷಿ, ಶಾಂತ ಆರ್. ನಾಯ್ಕ್, ಖಲೀಲ್ ಬಜಾಲ್, ಮನ್ಸೂರ್ ಪಿ.ಎಂ., ಫ್ರಾನ್ಸಿಸ್ ಡಿ’ಸೋಜ, ಮುಹಮ್ಮದ್ ಮಜಾಲ್, ಕೆ. ಸದಾಶಿವ, ಪುರುಷೋತ್ತಮ ಅರಿಬೈಲು, ದಾಮೋದರ, ಬಾಬು ಬಂದ್ಯೋಡು, ಇರ್ಷಾದ್ ಮಂಜೇಶ್ವರ, ಜಗದೀಶ್ ಮೂಡಂಬೈಲು, ನಾಗೇಶ್ ಮಂಜೇಶ್ವರ, ಗೀತಾ ಬಂದ್ಯೋಡು, ಜೆಸ್ಸಿ ಕಣ್ವತೀರ್ಥ, ಹಮೀದ್ ಕಣಿಯೂರು, ಮುಹಮ್ಮದ್ ಜೆ., ದಿವಾಕರ ಎಸ್.ಜೆ, ಮುಹಮ್ಮದ್ ಸಿಗಂದಡಿ ಭಾಗವಹಿಸಿದರು.