ರಾಜ್ಯದ ಜನತೆಗೆ ವಿದ್ಯುತ್ ಶಾಕ್
ಕಾಸರಗೋಡು: ರಾಜ್ಯದಲ್ಲಿ ವಿದ್ಯುತ್ ದರ ಮತ್ತೆ ಏರಿಸಲಾಗಿದೆ. ಆ ಮೂಲಕ ವಿದ್ಯುತ್ ಬಳಕೆದಾರರಿಗೆ ಶಾಕ್ ನೀಡಿದಂತಾಗಿದೆ. ಇದರಂತೆ ಗೃಹ ಬಳಕೆ ವಿದ್ಯುತ್ಗೆ ಯೂನಿಟ್ಗೆ ತಲಾ ೩೦ ಪೈಸೆಯಂತೆ ಹಾಗೂ ಉದ್ಯಮಗಳಿಗೆ ತಲಾ ೧೫ ಪೈಸೆಯಂತೆ ರಾಜ್ಯ ವಿದ್ಯುತ್ ರೆಗ್ಯುಲೇಟರಿ ಆಯೋಗ ಹೆಚ್ಚಿಸಿ ಅಧಿಸೂಚನೆ ಜ್ಯಾರಿಗೊಳಿಸಿದೆ. ಈ ಹೆಚ್ಚಳವನ್ನು ನವಂಬರ್ ಒಂದರಿಂದಲೇ ಅನ್ವಯಗೊಳಿಸಿ ಜ್ಯಾರಿಗೊಳಿಸಲಾಗಿದೆ.
ವಿದ್ಯುತ್ಗೆ ಈ ವರ್ಷ ಯೂನಿಟ್ ಒಂದಕ್ಕೆ ತಲಾ ೪೦.೬ ಪೈಸೆಯಂತೆ ಹೆಚ್ಚಿಸುವಂತೆ ವಿದ್ಯುನ್ಮಂಡಳಿ ಆಯೋಗದೊಂದಿಗೆ ಕೇಳಿಕೊಂಡಿತ್ತು. ಆದರೆ ಅದನ್ನು ಅಂಗೀಕರಿಸದ ಆಯೋಗ ಮುಂದಿನ ಎಂಟು ತಿಂಗಳಿಗೆ ಸರಾಸರಿ ೨೦ ಪೈಸೆಯಂತೆ ಹೆಚ್ಚಿಸಿದೆ. ಇನ್ನು ಮುಂದಿನ ಜೂನ್ನಲ್ಲಿ ವಿದ್ಯುತ್ ದರ ಮತ್ತೆ ಹೆಚ್ಚುವ ಸಾಧ್ಯತೆ ಇದೆ.
ಇದೇ ಸಂದರ್ಭದಲ್ಲಿ ಬಡತನ ರೇಖೆಗಿಂತ ಕೆಳಸ್ತರದಲ್ಲಿರುವ ಕುಟುಂ ಬಗಳನ್ನು ವಿದ್ಯುತ್ ದರ ಏರಿಕೆಯಿಂದ ಆಯೋಗ ಹೊರತುಪಡಿ ಸಿದೆ. ಅದೇ ರೀತಿ ಕಿರು ಉದ್ದಿಮೆ ವಲಯದ ವಿದ್ಯುತ್ ದರ ಹೆಚ್ಚಿಸಲಾಗಿಲ್ಲ. ಆದರೆ ಫಿಕ್ಸೆಡ್ ಚಾರ್ಜ್ ಹೆಚ್ಚಿಸಲಾಗಿದೆ.
ಬೃಹತ್ ಉದ್ದಿಮೆಗಳಿಗೆ ತಲಾ ಐದು ಪೈಸೆಯಂತೆಯೂ, ಎಕ್ಸ್ಟ್ರಾ ಹೈಟೆನ್ಶನ್ ಉದ್ದಿಮೆಗಳ ವಿದ್ಯುತ್ ದರದಲ್ಲಿ ಯೂನಿಟ್ ಒಂದಕ್ಕೆ ತಲಾ ೧೫ ಪೈಸೆಯಂತೆ ಹೆಚ್ಚಿಸಲಾಗಿದೆ.
ವಿದ್ಯುತ್ ದರ ಏರಿಕೆಯ ಹೊರತಾಗಿ ವಿದ್ಯುತ್ ಉಪಯೋಗಿ ಸಿದರೂ, ಉಪಯೋಗಿಸದಿದ್ದರೂ ಫಿಕ್ಸೆಡ್ ಚಾರ್ಜ್ನಲ್ಲಿ ಹೆಚ್ಚಳ ತರಲಾಗಿದೆ. ಇದರಂತೆ ಮನೆಗಳ ಫಿಕ್ಸೆಡ್ ಚಾರ್ಜ್ನಲ್ಲಿ ತಲಾ ಐದು ರೂ. ನಿಂದ ೩೫ ರೂ. ತನಕ ಹೆಚ್ಚಿಸಲಾಗಿದೆ.
ತಿಂಗಳಿಗೆ ೨೫೦ ಯೂನಿಟ್ ತನಕ ವಿದ್ಯುತ್ ಉಪಯೋಗಿಸುವ ಮನೆಗಳಿಗೆ ಯೂನಿಟ್ ದರದಲ್ಲಿ ಗರಿಷ್ಠ ೨೦ ಪೈಸೆಗಿಂತ ಕೆಳಗೆ ಮಾತ್ರವೇ ದರ ಏರಿಸ ಲಾಗಿದೆ ಎಂದು ಆಯೋಗ ತಿಳಿಸಿದೆ. ರಾಜ್ಯದಲ್ಲಿ ಒಟ್ಟಾರೆಯಾಗಿ ೧.೦೫ ಗಹ ಬಳಕೆದಾರರಿದ್ದಾರೆ. ಇದರಲ್ಲಿ ೯೯.೧೧ ಲಕ್ಷದಷ್ಟು ಮಂದಿ ತಿಂಗಳಿಗೆ ೨೫೦ ಯೂನಿಟ್ಗಿಂತಲೂ ಕೆಳಗೆ ವಿದ್ಯುತ್ ಬಳಸುವ ವಿಭಾಗಕ್ಕೆ ಒಳಗೊಂಡವರಾ ಗಿದ್ದಾರೆಂದು ಆಯೋಗ ತಿಳಿಸಿದೆ.