ರಾಜ್ಯದ ಮತದಾರರಲ್ಲಿ ಶೇ. ೫೨ರಷ್ಟು ಮಹಿಳೆಯರು ಆದರೆ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಶೇ. ೮.೫ ಮಾತ್ರ

ಕಾಸರಗೋಡು: ಕೇರಳದ ಒಟ್ಟು ಮತದಾರರ ಪೈಕಿ ಶೇ. ೫೨ರಷ್ಟು ಮಹಿಳೆಯರೇ ಆಗಿದ್ದು,  ಅಂದರೆ ರಾಜ್ಯ ವಿಧಾನಸಭೆಯಲ್ಲಿ ಅವರ ಪ್ರಾತಿನಿಧ್ಯ ಕೇವಲ ೮.೫ ಮಾತ್ರವೇ ಆಗಿದೆ. ಮಹಿಳೆಯರಿಗೆ ಶೇ. ೩೩ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಎಡರಂಗ, ಐಕ್ಯರಂಗ ಮತ್ತು ಎನ್‌ಡಿಎ ಹೇಳುತ್ತಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ೪೭ ಮಹಿಳೆಯ ರನ್ನು  ಮಾತ್ರವೇ ಈ ಮೂರು ಒಕ್ಕೂ ಟಗಳು ಚುನಾವಣಾ ರಂಗಕ್ಕಿಳಿಸಿದ್ದವು. ಇದರಲ್ಲಾದರೋ ಗೆಲುವು ಸಾಧಿಸಿದ್ದು ೧೨ ಮಂದಿ ಮಾತ್ರವಿರುವ ಕೇರಳ ಅಂದರೆ ಒಟ್ಟು ೧೪೦ ವಿಧಾನಸಭಾ ಕ್ಷೇತ್ರಗಳು ಹಾಗೂ ಮತದಾರರಲ್ಲಿ ಮಹಿಳೆಯರದ್ದೇ ಪ್ರಾಬಲ್ಯ  ವಿಧಾನಸಭೆಯಲ್ಲಿ  ಈಗ ಅವರ ಪ್ರಾತಿನಿಧ್ಯ ಈಗಿರುವುದು ಕೇವಲ ೮.೫ ಮಾತ್ರವೇ ಆಗಿದೆ. ಇನ್ನು ಕಳದ ವಿಧಾನಸಭಾ  ಚುನಾವಣೆಯಲ್ಲಿ  ೫೮ ಮಹಿಳೆಯರನ್ನು ಪಕ್ಷೇತರ ಉಮೇ ದ್ವಾರನ್ನಾಗಿಯೂ ಕಣಕ್ಕಿಳಿಸಲಾಗಿತ್ತು. ಅಂದರೆ ಕಳೆದ  ಚುನಾವಣೆಯಲ್ಲಿ ಒಟ್ಟಾರೆಯಾಗಿ ೧೦೫ ಮಹಿಳೆಯರು  ಸ್ಪರ್ಧಾ ಕಣದಲ್ಲಿದ್ದರು. ಆ ಪೈಕಿ ೧೨ ಮಂದಿಗೆ ಮಾತ್ರವೇ ಗೆಲ್ಲುವ ಭಾಗ್ಯ ಉಂಟಾಗಿತ್ತು.

ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ೨೦, ಎಡರಂಗ ೧೫ ಮತ್ತು ಯುಡಿ ಎಫ್ ೧೨ ಮಹಿಳಾ ಉಮೇದ್ವಾರರ ನ್ನು ಕಣಕ್ಕಿಳಿಸಿತ್ತು. ಗೆಲುವು ಸಾಧ್ಯತೆ ಇಲ್ಲದ ಕ್ಷೇತ್ರಗಳಲ್ಲೇ ಮಹಿಳಾ ಉಮೇದ್ವಾರರನ್ನು ಸ್ಪರ್ಧಾ ಕಣಕ್ಕಿಳಿಸ ಲಾಗುತ್ತಿದೆ ಎಂಬ ದೂರುಗಳು ಈ ಹಿಂದಿನಿಂದಲೇ  ಉಂಟಾಗುತ್ತಿತ್ತು.

Leave a Reply

Your email address will not be published. Required fields are marked *

You cannot copy content of this page