ರಾಜ್ಯ ಮಟ್ಟದ ವಿ.ವಿ. ಕಲೋತ್ಸವ ಪರಿಗಣನೆಯಲ್ಲಿ-ಸಚಿವೆ
ಮುನ್ನಾಡು: ಈಗ ಕೇವಲ ವಿಶ್ವವಿದ್ಯಾಲಯ ಮಟ್ಟದ ಕಾಲೇಜುಗಳಿಗೆ ಮಾತ್ರವಾಗಿ ನಡೆಸಲಾಗುತ್ತಿರುವ ಕಲೋತ್ಸವವನ್ನು ಮುಂದೆ ರಾಜ್ಯ ಮಟ್ಟದಲ್ಲಿ ನಡೆಸುವ ವಿಷಯ ಸರಕಾರದ ಪರಿಗಣನೆಯಲ್ಲಿ ದೆಯೆಂದು ರಾಜ್ಯ ಉನ್ನತ ಶಿಕ್ಷಣ ಸಚಿವೆ ಡಾ. ಆರ್. ಬಿಂದು ಹೇಳಿದ್ದಾರೆ.
ಮುನ್ನಾಡು ಪೀಪಲ್ಸ್ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜಿನಲ್ಲಿ ನಿನ್ನೆ ಸಮಾಪ್ತಿಗೊಂಡ ಕಣ್ಣೂರು ವಿಶ್ವವಿದ್ಯಾ ಲಯದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಸಚಿವೆ ಮಾತನಾಡುತ್ತಿದ್ದರು. ಈ ಹಿಂದೆ ಏಕೀಕೃತ ರೀತಿಯ ಕಲೋತ್ಸವ ಆರಂಭಿಸಲಾಯಿ ತಾದರೂ ಅದನ್ನು ಮುಂದುವರಿಸಲು ಬಳಿಕ ಸಾಧ್ಯವಾಗಿರಲಿಲ್ಲವೆಂದು ಸಚಿವೆ ಹೇಳಿದ್ದಾರೆ.
ಕಣ್ಣೂರು ವಿ.ವಿ ಯೂನಿಯನ್ ಅಧ್ಯಕ್ಷೆ ಟಿ.ಪಿ. ಅಖಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಅಮೀರ್ ಪಳ್ಳಿಕ್ಕಾಲ್, ನಟಿ ಗಾಯತ್ರಿ ವರ್ಷಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಿಂಡಿಕೇಟ್ ಸದಸ್ಯರಾದ ಎನ್. ಸುಕನ್ಯಾ, ಟಿ.ವಿ. ನಫೀಸಾ ಬೇಬಿ, ಪ್ರೊ. ಜೋಬಿ ಕೆ. ಜೋಸ್, ಎ. ಅಶೋಕನ್, ಕೆ. ಚಂದ್ರಹಾಸನ್, ವಿ.ವಿ. ರಮೇಶನ್, ಇ. ಪದ್ಮಾವತಿ, ಎಂ. ಅನಂತನ್, ಸಿ. ರಾಮಚಂದ್ರನ್, ಬ್ಲೋಕ್ ಪಂಚಾಯತ್ ಉಪಾಧ್ಯಕ್ಷೆ ಕೆ. ರಮಣಿ, ಬ್ಲೋಕ್ ಪಂಚಾಯತ್ ಸದಸ್ಯೆ ಸಾವಿತ್ರಿ ಬಾಲನ್, ಕಾಲೇಜು ಪ್ರಾಂಶುಪಾಲ ಕೆ. ಲುಕೋಸ್, ಅನನ್ಯಚಂದ್ರನ್, ಮಹಮ್ಮದ್ ಫಯಾಸ್, ಕೆ. ಪ್ರಜೀನ, ಕೆ. ಭಾಸ್ಕರನ್, ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಬಿಪಿನ್ ರಾಜ್ ಪಾಯಂ, ವಿಷ್ಣು ಮೊದಲಾದವರು ಮಾತನಾಡಿದರು.