ರಾಜ್ಯ ಶಾಲಾ ಕಲೋತ್ಸವ: ಕಾಸರಗೋಡು ಬಿಇಎಂ ಶಾಲಾ ಮಕ್ಕಳ ಯಕ್ಷಗಾನ ತಂಡಕ್ಕೆ ಎ ಗ್ರೇಡ್

ಕಾಸರಗೋಡು: ಕೊಲ್ಲಂ ಜಿಲ್ಲೆಯಲ್ಲಿ ನಡೆದ 62ನೇ ಕೇರಳ ಶಾಲಾ ಕಲೋತ್ಸವದ ಹೆÊಸ್ಕೂಲï ವಿಭಾಗ ಯಕ್ಷಗಾನ ಸ್ಪರ್ಧೆಯಲ್ಲಿ ಎ ಗ್ರೇಡ್ ಸ್ಥಾನ ಗಳಿಸುವ ಮೂಲಕ ಬಿಇಎಂ ಶಾಲಾ ಮಕ್ಕಳ ಯಕ್ಷಗಾನ ತಂಡ ಹೊಸ ಇತಿಹಾಸ ದಾಖಲಿಸಿದೆ.
ಶಿಕ್ಷಕ ಯಶ್ವಂತ.ವೈ. ಅವರ ನೇತೃತ್ವದಲ್ಲಿ, ಮುಖ್ಯೋಪಾಧ್ಯಾಯ ವಿನ್ಸೆಂಟ್ ವಿನ್ಸ್ಟನ್ ಅವರ ಪ್ರೋತ್ಸಾಹದೊಂದಿಗೆ, ರಮೇಶ್ ಶೆಟ್ಟಿ ಬಾಯಾರು ಅವರ ನಿರ್ದೇಶನ ಹಾಗೂ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಧ್ಯಕ್ಷ ಕೆ.ಎನ್.ವೆಂಕಟರಮಣ ಹೊಳ್ಳ ಇವರ ಮುಂದಾಳುತ್ವದಲ್ಲಿ ರೂಪುಗೊಂಡ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಈ ಹೆಗ್ಗಳಿಕೆಗೆ ಪಾತ್ರವಾಯಿತು. ರಾಜ್ಯಮಟ್ಟದಲ್ಲಿ ಬಿಇಎಂ ಶಾಲಾ ಮಕ್ಕಳ ಯಕ್ಷಗಾನ ತಂಡವು ಪ್ರದರ್ಶಿಸಿದ ‘ನರಕಾಸುರ ಮೋಕ್ಷ’ ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ್ ಮಯ್ಯ, ಚೆಂಡೆಯಲ್ಲಿ ಶಂಕರ ನಾರಾಯಣ ಪದ್ಯಾಣ, ಮದ್ದಳೆ ಲವಕುಮಾರ್ ಐಲ ಹಾಗೂ ಚಕ್ರತಾಳದಲ್ಲಿ ಅರ್ಪಿತ್ ಕೂಡ್ಲು ಸಹಕರಿಸಿದ್ದರು.
ಮುಮ್ಮೇಳದಲ್ಲಿ ಅನುಶ್ರೀ ಹೊಳ್ಳ, ಯತಿರಾಜ್ ರೈ, ಆಕಾಶ್, ಪ್ರೀತಿ ಕಲ್ಲೂರಾಯ, ಸಮನ್ವಿತಾ.ಕೆ.ಬಿ, ಪ್ರಣವ್ ಕೃಷ್ಣ, ಸಂಚಿತ್ ಉತ್ತಮ ಭಾಗವಹಿಸಿದ್ದಾರೆ. ಮುಖ ವರ್ಣಿಕೆ ಹಾಗೂ ವೇಷಭೂಷಣದಲ್ಲಿ ರಾಕೇಶ್ ಗೋಳಿಯಡ್ಕ ಹಾಗೂ ಸುಧಾಕರ, ಎಡನೀರು ಮಠದ ಶ್ರೀ ರಾಘವೇಂದ್ರ ಕೆದಿಲಾಯ, ಶಾಲಾ ಶಿಕ್ಷಕ ಶಿಕ್ಷಕಿಯರಾದ ರೋಹಿತಾಕ್ಷಿ, ನೀನಾ, ಅಜೇಶ್ ಮಾತ್ರವಲ್ಲದೆ ವಿದ್ಯಾರ್ಥಿಗಳ ರಕ್ಷಕರಾದ ಅರುಣಾ ರಾಮಕೃಷ್ಣ ಹೊಳ್ಳ, ಪ್ರಾರ್ಥನಾಉದಯ ಕಲ್ಲೂರಾಯ, ಚಂದ್ರಿಕಾ, ವಿದ್ಯಾಗಣೇಶ್ ಸಹಕಾರ ನೀಡಿದರು. ಕಳೆದ ಕೆಲವು ವರ್ಷಗಳಿಂದ ಶ್ರೀ ವೆಂಕಟರಮಣ ಯಕ್ಷಗಾನ ಅಧ್ಯಯನ ಕೇಂದ್ರ ಕಾಸರಗೋಡು ವಿದ್ಯಾರ್ಥಿಗಳಿಗೆ ವೇಷಭೂಷಣಗಳನ್ನು ಉಚಿತವಾಗಿ ನೀಡುತ್ತಿದ್ದು ಈ ವರ್ಷವೂ ಪೂರ್ಣ ಸಹಕಾರ ನೀಡಿದೆ. ಯಕ್ಷಗಾನ ತಂಡದ ಈ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ತಂಡ ಅಬಿsನಂದಿಸಿದೆ.

Leave a Reply

Your email address will not be published. Required fields are marked *

You cannot copy content of this page