ರಾಜ್ಯ ಶಾಲಾ ಕಲೋತ್ಸವ: ಚಟ್ಟಂಚಾಲ್, ದುರ್ಗಾ ಶಾಲೆ ವಿದ್ಯಾರ್ಥಿಗಳ ಗಣನೀಯ ಸಾಧನೆ
ಕಾಸರಗೋಡು: ರಾಜ್ಯ ಶಾಲಾ ಕಲೋತ್ಸವ ಕೊನೆಗೊಂಡಾಗ ಅಂಕ ಪಟ್ಟಿಯಲ್ಲಿ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಜಿಲ್ಲೆಗೆ ನಷ್ಟವಾಗಿದೆ. ಕಳೆದ ಬಾರಿ ೯ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ೧೦ಕ್ಕೆ ತಲುಪಿದೆ. ೮೪೬ ಅಂಕ ಪಡೆದ ಜಿಲ್ಲೆಯಲ್ಲಿ ಹೈಸ್ಕೂಲ್ ವಿಭಾಗದಲ್ಲಿ ೪೧೬, ಹೈಯರ್ ಸೆಕೆಂ ಡರಿ ವಿಭಾಗದಲ್ಲಿ ೪೩೦, ಹೈಸ್ಕೂಲ್ ಅರೆಬಿಕ್, ಸಂಸ್ಕೃತೋತ್ಸವಗಳಲ್ಲಿ ೯೩ ಅಂಕದಂತೆ ಲಭಿಸಿದೆ. ಹೆಚ್ಚುವರಿ ವಿಭಾಗಗಳಲ್ಲಿ ಈ ಬಾರಿ ಸ್ಪರ್ಧಿಸಲಾಗಿದ್ದರೂ ಅಂಕಪಟ್ಟಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.
ಹೈಯರ್ ಸೆಕೆಂಡರಿ ವಿಭಾಗ ದಲ್ಲಿ ಸಿಎಚ್‌ಎಸ್‌ಎಸ್ ಚಟ್ಟಂ ಚಾಲ್ ೫೩ ಅಂಕದೊಂದಿಗೆ ರಾಜ್ಯ ಮಟ್ಟದಲ್ಲೇ ನಾಲ್ಕನೇ ಸ್ಥಾನ ಗಳಿಸಿದೆ. ದುರ್ಗ ಎಚ್‌ಎಸ್‌ಎಸ್ ೪೬ ಅಂಕ ಪಡೆದು ರಾಜ್ಯಮಟ್ಟದಲ್ಲಿ ೮ನೇ ಸ್ಥಾನಕ್ಕೆ ತಲುಪಿದೆ. ರಾಜಾಸ್ ಎಚ್‌ಎಸ್‌ಎಸ್ ೧೪ನೇ ಸ್ಥಾನದಲ್ಲೂ, ಜಿಎಚ್‌ಎಸ್‌ಎಸ್ ಕಂಬಲ್ಲೂರು ೨೫ನೇ ಸ್ಥಾನದಲ್ಲೂ, ಸಿಜೆಎಚ್‌ಎಸ್‌ಎಸ್ ಚೆಮ್ನಾಡ್ ೩೯ನೇ ಸ್ಥಾನ ಪಡೆದಿದೆ.
ಹೈಸ್ಕೂಲ್ ಸಾರ್ವಜನಿಕ ವಿಭಾಗದಲ್ಲಿ ದುರ್ಗಾ ಎಚ್‌ಎಸ್‌ಎಸ್ ಕಾಞಂಗಾಡ್ ರಾಜ್ಯ ಮಟ್ಟದಲ್ಲಿ ೧೫ನೇ ಸ್ಥಾನಕ್ಕೆ ತಲುಪಿದೆ. ಹೈಸ್ಕೂಲ್ ಸಂಸ್ಕೃತೋತ್ಸವದಲ್ಲಿ ನೀಲೇಶ್ವರ ರಾಜಾಸ್ ೩೦ ಅಂಕ ಪಡೆದು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿದೆ. ರಾಜ್ಯ ಮಟ್ಟದಲ್ಲಿ ೫ನೇ ಸ್ಥಾನ ಈ ಶಾಲೆಗಿದೆ. ಎಂಎಸ್‌ಸಿಎಚ್‌ಎಸ್ ಪೆರಡಾಲ ೨೫ ಅಂಕ ಪಡೆದು ರಾಜ್ಯ ಮಟ್ಟದಲ್ಲಿ ೧೦ನೇ ಸ್ಥಾನದಲ್ಲೂ, ೨೩ ಅಂಕ ಪಡೆದ ದುರ್ಗಾ ೧೧ನೇ ಸ್ಥಾನದಲ್ಲಿದೆ. ಅರೆಬಿಕ್ ಕಲೋತ್ಸವದಲ್ಲಿ ಮರಕ್ಕಾಪ್ ಕಡಪ್ಪುರಂ ಶಾಲೆ ೧೫ ಅಂಕ ಪಡೆದು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ೧೯ನೇ ಸ್ಥಾನ ಪಡೆದ ನಾಯ ಮ್ಮಾರ್‌ಮೂಲೆ ಟಿಐಎಚ್‌ಎಸ್ ಶಾಲೆಯ ೧೧ ವಿದ್ಯಾರ್ಥಿಗಳಿಗೆ ಎ ಗ್ರೇಡ್ ಲಭಿಸಿದೆ. ಹೈಸ್ಕೂಲ್ ವಿಭಾಗ ಅರಬಿ ಪದ್ಯ, ಅರಬಿ ಗಾನ, ಅರಬಿ ಸಮೂಹಗಾನ, ಹೈಯರ್ ಸೆಕೆಂಡರಿ ವಿಭಾಗ ಉರ್ದು ಕಥಾರಚನೆ, ಉರ್ದು ಪದ್ಯ ಎಂಬಿವುಗಳಲ್ಲಿ ಎ ಗ್ರೇಡ್ ಲಭಿಸಿದೆ.
ನೀರ್ಚಾಲು ಶಾಲೆಯ ನಾಲ್ಕು ವಿದ್ಯಾರ್ಥಿಗಳಿಂದ ಸಾಧನೆರಾಜ್ಯ ಮಟ್ಟದ ಕಲೋತ್ಸವದಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಿಂದ ಭಾಗವಹಿಸಿರುವುದು ನಾಲ್ಕು ವಿದ್ಯಾರ್ಥಿಗಳಾಗಿದ್ದರೂ ಇವರು ೪೮ ಅಂಕ ಪಡೆದಿದ್ದಾರೆ. ಹೈಸ್ಕೂಲ್ ಸಂಸ್ಕೃತ ವಿಭಾಗದಲ್ಲಿ ೨೫, ಸಾರ್ವಜನಿಕ ವಿಭಾಗದಲ್ಲಿ ೨೩ ಅಂಕ ಗಳಿಸಿ ಈ ನಾಲ್ಕು ಮಂದಿಯ ತಂಡ ಈ ಸಾಧನೆ ಗೈದಿದೆ. ಹೈಸ್ಕೂಲ್ ವಿಭಾಗ ಕನ್ನಡ ಪದ್ಯ, ಸಂಸ್ಕೃತ ಗಾನಾಲಾಪನೆ, ಶಾಸ್ತ್ರೀಯ ಸಂಗೀತದಲ್ಲಿ ಎ ಗ್ರೇಡ್, ವಯಲಿನ್ ಪಾಶ್ಚಾತ್ಯ ಬಿ ಗ್ರೇಡ್ ಟಿ. ಅನ್ವಿತ ಗಳಿಸಿದ್ದಾಳೆ. ಹೈಸ್ಕೂಲ್ ವಿಭಾಗ ಸಂಸ್ಕೃತ ಸಮಸ್ಯ ಪೂರಣಂ, ಸಂಸ್ಕೃತ ಉಪನ್ಯಾಸ ರಚನೆ, ಸಂಸ್ಕೃತ ಪ್ರಭಾಷಣೆ ಎಂಬಿವುಗಳಲ್ಲಿ ಎ ಗ್ರೇಡ್ ಗಳಿಸಿದ ಕೆ.ಎನ್. ಅನಿರುದ್ಧ, ಸಂಸ್ಕೃತ ಕಥಾ ರಚನೆಯಲ್ಲಿ ವಿ.ಎಂ. ಶಮ ಎ ಗ್ರೇಡ್ ಗಳಿಸಿದ್ದಾಳೆ. ಹೈಸ್ಕೂಲ್ ವಿಭಾಗ ಹಿಂದಿ ಭಾಷಣ, ಹಿಂದಿ ಉಪನ್ಯಾಸ ರಚನೆ ಎಂಬಿವುಗಳಲ್ಲಿ ಭಾವನಾ ನಾಯ್ಕ್ ಎ ಗ್ರೇಡ್ ಗಳಿಸಿದ್ದಾಳೆ.