ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ : ಕ್ರಿಯಾ ಸಮಿತಿಯಿಂದ ಬೃಹತ್ ಪ್ರತಿಭಟನೆ
ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅಂಗವಾಗಿ ಕುಂಬಳೆ ಪೇಟೆಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ನಿರ್ಮಾಣ ವಿರುದ್ಧ ಕ್ರಿಯಾ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪೇಟೆಗೆ ಪ್ರವೇಶಿಸುವ ಜಂಕ್ಷನ್‌ನಲ್ಲಿ ಪ್ಲೈ ಓವರ್ ನಿರ್ಮಿಸಬೇಕು, ಕುಂಬಳೆ ಸೇತುವೆಯಿಂದ ರೈಲ್ವೇ ನಿಲ್ದಾಣವರೆಗೆ ಪೂರ್ಣವಾಗಿ ಸರ್ವೀಸ್ ರಸ್ತೆ ನಿರ್ಮಿಸಬೇಕು, ಕರಾವಳಿ ಪ್ರದೇಶಕ್ಕೆ ವಾಹನಗಳು ಸಾಗುವ ಭಾಗದಲ್ಲಿ ಸರ್ವೀಸ್ ರಸ್ತೆ ದ್ವಿಪಥಗೊಳಿಸಬೇಕು ಮೊದಲಾದ ಬೇಡಿಕೆ ಮುಂದಿರಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದರು. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಕುಂಬಳೆ ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ ಯೂಸಫ್ ಅಧ್ಯಕ್ಷತೆ ವಹಿಸಿದರು. ಕ್ರಿಯಾ ಸಮಿತಿ ಕನ್ವೀನರ್ ಎ.ಕೆ. ಆರಿಫ್ ಸ್ವಾಗತಿಸಿದರು. ವಿವಿಧ ಪಕ್ಷಗಳ ಮುಖಂಡರಾದ ವಿ. ರವೀಂದ್ರನ್, ರಘುದೇವನ್ ಮಾಸ್ತರ್, ಮಂಜುನಾಥ ಆಳ್ವ, ಎಂ. ಅಬ್ಬಾಸ್, ಜಿಲ್ಲಾ ಪಂಚಾಯತ್ ಸದಸ್ಯೆ ಜಮೀಲ ಸಿದ್ದಿಕ್, ಬ್ಲೋಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಪಂಚಾಯತ್ ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯೀ ಸಮಿತಿ ಅಧ್ಯಕ್ಷ ಎಂ. ಸಬೂರ, ಪಂ. ಸದಸ್ಯರಾದ ಯೂಸುಫ್ ಉಳುವಾರು, ರವಿರಾಜ್, ಅನ್ವರ್, ಹುಸೈನ್, ಪ್ರೇಮಲತ, ಪ್ರೇಮಾವತಿ, ಪ್ರೇಮ ಶೆಟ್ಟಿ, ಕೌಲತ್ ಬೇಬಿ, ವಿದ್ಯಾ ಪೈ, ರಿಯಾಸ್ ಮೊಗ್ರಾಲ್, ಶೋಭ, ಮೋಹನನ್, ಬಿ.ಎನ್. ಮುಹಮ್ಮದ್, ಸತ್ತಾರ್ ಆರಿಕ್ಕಾಡಿ, ಅಸೀಸ್ ಕಳತ್ತೂರು, ಸುರೇಶ್ ಕುಮಾರ್ ಶೆಟ್ಟಿ, ಲಕ್ಷ್ಮಣ ಪ್ರಭು, ಸುಜಿತ್ ರೈ, ಅಸೀಸ್ ಕಳತ್ತೂರು, ರವಿ ಪೂಜಾರಿ, ಸಿದ್ದಿಕ್ ದಂಡೆಗೋಳಿ, ರಾಜೇಶ್, ಅನ್ವರ್, ಟಿ.ಎಂ. ಶುಹೈಬ್, ನಾಸರ್ ಬಂಬ್ರಾಣ, ಇಬ್ರಾಹಿಂ ಬತ್ತೇರಿ, ಮಮ್ಮು ಮುಬಾರಕ್, ರಘುನಾಥ ಪೈ, ಫಾದರ್ ಲೋಬೋ, ಡೋಲ್ಫಿನ್ ಡಿ’ಸೋಜಾ, ಅಹಮ್ಮದಲಿ ಕುಂಬಳೆ, ರಾಂಭಟ್, ಕೃಷ್ಣ ಗಟ್ಟಿ, ಬಿ.ಎ. ರಹ್ಮಾನ್ ಆರಿಕ್ಕಾಡಿ ಮೊದಲಾದವರು ಮಾತನಾಡಿದರು.