ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ತಂದಿರಿಸಿದ್ದ 2.75 ಲಕ್ಷ ರೂ.ಗಳ ಸಾಮಗ್ರಿ ಕಳವು: ಇಬ್ಬರ ಸೆರೆ
ಉಪ್ಪಳ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ತಂದಿರಿಸಿದ್ದ ಗುತ್ತಿಗೆ ಕಂಪೆನಿಯ 2.75 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕಳವುಗೈದ ಇಬ್ಬರು ಕರ್ನಾಟಕ ನಿವಾಸಿಗಳನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ನಿವಾಸಿ ಅಮೀರ್ ಭಾಷಾ, ಬೆಂಗಳೂರು ದಸರಾಹಳ್ಳಿಯ ಪುನೀತ್ ಕುಮಾರ್ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಉಪ್ಪಳದಲ್ಲಿ ತಂದಿಳಿಸಲಾಗಿದ್ದ ಕಾಂಕ್ರೀಟ್ ನಡೆಸುವ ಐದು ಕ್ರಂಚ್ ಬಾರಿಯರ್ ಮೋಲ್ಡ್ ಗಳನ್ನು ಕಳ್ಳರು ಕದ್ದೊಯ್ದಿದ್ದರು. ಶನಿವಾರ ರಾತ್ರಿ ಈ ಕಳವು ನಡೆದಿತ್ತು. ಗುತ್ತಿಗೆ ಕಂಪೆನಿಯವರ ದೂರಿನಂತೆ ಮಂಜೇಶ್ವರ ಪೊಲೀಸರು ನಡೆಸಿದ ತನಿಖೆಯಲ್ಲಿ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ. ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಈ ವೇಳೆ ರಿಮಾಂಡ್ ವಿಧಿಸಲಾಗಿದೆ. ಮಂಜೇಶ್ವರ ಗ್ರೇಡ್ ಎಸ್‌ಐ ಇಸ್ಮಾಯಿಲ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ನಿತಿನ್, ವಿನೇಶ್, ರಜಿತ್, ಚಾಲಕ ಪ್ರಶೋಬ್ ಎಂಬಿವರು ಕಾರ್ಯಾಚ ರಣೆ ನಡೆಸಿದ ತಂಡದಲ್ಲಿದ್ದರು.