ರಾಸಾಯನಿಕ ದುರಂತ ಬಗ್ಗೆ ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿ ಅಣಕು ಪ್ರದರ್ಶನ
ಕುಂಬಳೆ: ಜಿಲ್ಲಾ ದುರಂತ ನಿವಾರಣಾ ಕಾರ್ಯಾಗಾರ, ದೇಶೀಯ ದುರಂತ ನಿವಾರಣಾ ಸೇನೆ ಇದರ ಜಂಟಿ ಆಶ್ರಯದಲ್ಲಿ ಸಿಬಿಆರ್‌ಎನ್ ಅಣಕು ಪ್ರದರ್ಶನ ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿ ಏರ್ಪಡಿಸಲಾಯಿತು. ಕೈಗಾರಿಕಾ ಕೇಂದಗಳಲ್ಲಿರುವ ರಾಸಾಯನಿಕ ಕೇಂದ್ರಗಳಿಂದ ಸಂಭವಿಸಬಹುದಾದ ದುರಂತಗಳನ್ನು ಗಣನೆಗೆ ತೆಗೆದು ಅನಾಹುತವನ್ನು ಲಘುಕರಿಸುವ ದೃಷ್ಟಿಯಿಂದ ಮಾಡಬೇಕಾದ ತುರ್ತು ಕಾರ್ಯಗಳನ್ನು ಪರಿಚಯಿಸು ವುದರಂಗವಾಗಿ ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು.
ಕೈಗಾರಿಕೆ ಕೇಂದ್ರದ ಎಲ್ಲಾ ವಿಭಾಗಗಳೂ ಮುಂಜಾಗ್ರತಾ ಕ್ರಮದ ಸಜ್ಜೀಕರಣಗಳನ್ನು ಹೇಗೆ ಮಾಡಿಕೊಳ್ಳಬಹುದೆಂಬುದನ್ನು ಅಣಕು ಪ್ರದರ್ಶನದ ಮೂಲಕ ತೋರಿಸಿಕೊಡಲಾಯಿತು. ದೇಶೀಯ ದುರಂತ ನಿವಾರಣಾ ಸೇನೆ ನಾಲ್ಕನೇ ಬೆಟಾಲಿಯನ್ ಉಪ ನಿರ್ದೇಶಕ ಪ್ರವೀಣ್, ಮಂಜೇಶ್ವರ ತಹಶೀಲ್ದಾರ್ ಎಂ. ಶ್ರೀನಿವಾಸ್, ಉಪ್ಪಳ ಅಗ್ನಿಶಾಮಕ ದಳದ ಅಧಿಕಾರಿ ಸಿ.ಪಿ. ರಾಜನ್ ಅಣಕು ಪ್ರದರ್ಶನಕ್ಕೆ ನೇತೃತ್ವ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.