ರಿಯಾಸ್ ಮೌಲವಿ ಕೊಲೆ ಪ್ರಕರಣ: ತೀರ್ಪು ಮತ್ತೆ ಮಾ.೩೦ಕ್ಕೆ ಮುಂದೂಡಿಕೆ
ಕಾಸರಗೋಡು: ಕಾಸರಗೋಡು ಹಳೇ ಸೂರ್ಲುನ ಮದ್ರಸಾ ಅಧ್ಯಾಪಕ ಕೊಡಗು ನಿವಾಸಿ ಮೊಹಮ್ಮದ್ ರಿಯಾಸ್ ಮೌಲವಿ (೨೭) ಕೊಲೆ ಪ್ರಕರಣದ ತೀರ್ಪು ನೀಡುವ ದಿನಾಂಕವನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಮತ್ತೆ ಮಾರ್ಚ್ ೩೦ಕ್ಕೆ ಮುಂದೂಡಿದೆ.
ಈ ಪ್ರಕರಣದ ತೀರ್ಪು ನೀಡುವ ದಿನಾಂಕವನ್ನು ಮಾ. ೨೦ಕ್ಕೆ ಮೀಸಲಿರಿಸಲಾಗಿತ್ತು. ಅದನ್ನು ನ್ಯಾಯಾಲಯ ಮಾ. ೩೦ಕ್ಕೆ ಮುಂದೂಡಿದೆ.
೨೦೧೭ ಮಾರ್ಚ್ ೨೦ರಂದು ರಿಯಾಸ್ ಮೌಲವಿಯವರನ್ನು ಹಳೇ ಸೂರ್ಲುನಲ್ಲಿ ಅವರು ವಾಸಿಸುತ್ತಿದ್ದ ವಾಸಸ್ಥಳದಲ್ಲೇ ಇರಿದು ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು.ಕೇಳುಗುಡ್ಡೆ ಪರಿಸರದ ನಿವಾಸಿಗಳಾದ ಅಖಿಲೇಶ್, ನಿತಿನ್ ಮತ್ತು ಅಜೀಶ್ ಎಂಬವರು ಈ ಕೊಲೆಗೈದ ಪ್ರಕರಣದ ಆರೋಪಿಗಳಾಗಿದ್ದಾರೆ. ಕೊಲೆ ನಡೆದ ಕೆಲವೇ ದಿನಗಲ್ಲಿ ಕ್ರೈಮ್ ಬ್ರಾಂಚ್ ಪೊಲೀಸರು ಆರೋಪಿಗಳನ್ನು ಬಂಧಿಸಿ ಬಳಿಕ ನ್ಯಾಯಾಂಗ ಬಂಧನದಲ್ಲಿರಿ ಸಲಾಗಿತ್ತು. ಆರೋಪಿಗಳು ಜಾಮೀನು ಲಭಿಸದೆ ಅಂದಿನಿಂದ ಈ ತನಕ ಅಂದರೆ ಕಳೆದ ಏಳು ವರ್ಷಗಳಿಂದ ಜೈಲಿನಲ್ಲೇ ನ್ಯಾಯಾಂಗ ಬಂಧನದಲ್ಲೇ ಕಳೆಯುತ್ತಿದ್ದಾರೆ.