ರೆಪೋದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್ಬಿಐ
ಮುಂಬೈ: ಹಣದುಬ್ಬರದ ಮೇಲೆ ಬಿಗಿಯಾದ ಜಾಗರೂ ಕತೆಯನ್ನು ಕಾಯ್ದುಕೊಳ್ಳು ತ್ತಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ಸತತ ಆರನೇ ಬಾರಿಗೆ ರೆಪೋದರವನ್ನು ಯಥಾಸ್ಥಿತಿಯಲ್ಲಿ ಮುಂ ದುವರಿಸಲು ನಿರ್ಧರಿಸಿದೆ. ಮೇ ೨೦೨೨ರಿಂದ ಸತತ ಆರು ದರ ಏರಿಕೆಗಳ ನಂತರ ೨೫೦ ಬೇಸಿಸ್ ಪಾಯಿಂಟ್ಗಳಿಗೆ ಒಟ್ಟುಗೂಡಿದ ನಂತರ ಕಳೆದ ವರ್ಷ ಎಪ್ರಿಲ್ನಲ್ಲಿ ದರ ಹೆಚ್ಚಳ ಚಕ್ರವನ್ನು ವಿರಾಮಗೊಳಿ ಸಲಾಗಿದೆ. ದ್ವೈ ಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ವಿತ್ತೀಯ ನೀತಿ ಸಮಿತಿ (ಎಂಪಿಸಿ) ರೆಪೋ ದರವನ್ನು ಶೇ. ೬.೫ಕ್ಕೆ ಬದಲಾಯಿಸದೆ ಹಾಗೆ ಇರಿಸಲು ನಿರ್ಧರಿಸಲಾಗಿ ದೆಯೆಂದು ತಿಳಿಸಿದ್ದಾರೆ.