ರೇಶನ್ ವ್ಯವಸ್ಥೆ ಬುಡಮೇಲು: ಮೀಂಜ, ಪೈವಳಿಕೆ, ಬದಿಯಡ್ಕ ರೇಶನ್ ಅಂಗಡಿ ಮುಂಭಾಗ ಕಾಂಗ್ರೆಸ್ ಧರಣಿ
ಮಂಜೇಶ್ವರ: ರಾಜ್ಯದಲ್ಲಿ ಸುದೃಢವಾಗಿದ್ದ ರೇಶನ್ ವ್ಯವಸ್ಥೆಯನ್ನು ಬುಡಮೇಲುಗೊಳಿಸಿ ರೇಶನ್ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಲು ಕೇಂದ್ರ, ರಾಜ್ಯ ಸರಕಾರ ಗಳು ಷಡ್ಯಂತ್ರ ಹೂಡಿವೆಯೆಂದು ಹರ್ಷಾದ್ ವರ್ಕಾಡಿ ಆರೋಪಿಸಿದ್ದಾರೆ. ವನ್ ನೇಶನ್ ವನ್ ರೇಶನ್ ಯೋಜನೆ ಯನ್ನು ಮೋದಿ ಸರಕಾರ ಜ್ಯಾರಿ ಮಾಡುವ ತರಾತುರಿಯಲ್ಲಿದ್ದು, ಇದು ಪಡಿತರ ವ್ಯವಸ್ಥೆಯನ್ನೇ ಇಲ್ಲವಾಗಿಸಲಿದೆ. ಕಳೆದೊಂದು ತಿಂಗಳಿನಿಂದ ರೇಶನ್ ಅಂಗಡಿಗಳಲ್ಲಿ ಆಹಾರ ಧಾನ್ಯಗಳು ಲಭಿಸುತ್ತಿಲ್ಲ. ರಾಜ್ಯ, ಕೇಂದ್ರ ಸರಕಾರಗಳ ದುರಾಡಳಿತದಿಂದ ಈ ಸ್ಥಿತಿ ನಿರ್ಮಾಣ ವಾಗಿದೆಯೆಂದು ಅವರು ಆರೋಪಿ ಸಿದರು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮೀಯಪದವು ರೇಶನ್ ಅಂಗಡಿ ಮುಂಭಾಗದಲ್ಲಿ ಜರಗಿದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ ಅಧ್ಯಕ್ಷತೆ ವಹಿಸಿದರು. ಜಿ. ರಾಮ ಭಟ್, ಶೇಖ್ ಅಬ್ಬಾಸ್, ಉಮ್ಮರ್ ಬೆಜ್ಜ, ಗಂಗಾಧರ ಕೆ, ಸೀತಾರಾಮ ಬೇರಿಕೆ, ಶಾಂತಾರಾಮ ಶೆಟ್ಟಿ ಬೆಜ್ಜ, ಮೆಟಿಲ್ಡಾ ಡಿ’ಸೋಜಾ, ಖಲಿಲ್, ಹೈದರ್, ಮೊಹಮ್ಮದ್ ಮದಂಗಲ್ಲು, ಬಡುವನ್ ಕುಂಞಿ, ಬೌತಿಸ್ ಡಿ’ಸೋಜಾ, ಖಾದರ್ ಬ್ಯಾರಿ, ಮೊಹಮ್ಮದ್ ಕೊಳಚಪ್ಪು, ಡೆಂಝಿಲ್ ಡಿ’ಸೋಜಾ, ಫ್ರಾನ್ಸಿಸ್ ಡಿ’ಸೋಜಾ, ಜೋಕಿಂ ಡಿ’ಸೋಜಾ, ಹಾರಿಸ್ ಮೀಯಪದವು ಉಪಸ್ಥಿತರಿದ್ದರು.
ಪೈವಳಿಕೆ: ಪೈವಳಿಕೆ ರೇಶನ್ ಅಂಗಡಿ ಮುಂಭಾಗ ನಡೆದ ಧರಣಿಯನ್ನು ಕುಂಬಳೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಕ್ಷ್ಮಣ ಪ್ರಭು ಉದ್ಘಾಟಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಕಾರ್ಯದರ್ಶಿ ರಾಘವೇಂದ್ರ ಭಟ್, ಉಪಾಧ್ಯಕ್ಷ ನಾರಾಯಣ ಏದಾರ್, ಮಂಡಲ ಉಪಾಧ್ಯಕ್ಷ ಶಾಜಿ ಎನ್.ಸಿ ಮಾತನಾಡಿದರು. ಮುಸ್ತಫ, ಎಡ್ವರ್ಡ್ ಡಿ’ಸೋಜಾ, ಮೊಯ್ದೀನ್ ಕುಂಞಿ, ಗಂಗಾಧರ ನಾಯ್ಕ್, ಬಾತಿಶ, ಐತ್ತಪ್ಪ ಅಟ್ಟೆಗೋಳಿ, ರೋನಿ, ಚನಿಯಪ್ಪ, ಶಿವರಾಮ ಶೆಟ್ಟಿ ಭಾಗವಹಿಸಿದರು.
ಬದಿಯಡ್ಕ:? ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆದ ಧರಣಿಯನ್ನು ಡಿಕೆಟಿಎಫ್ ಜಿಲ್ಲಾ ಅಧ್ಯಕ್ಷ ವಾಸುದೇವ ನಾಯರ್ ಉದ್ಘಾಟಿಸಿ ದರು. ಮಂಡಲ ಅಧ್ಯಕ್ಷ ಶ್ಯಾಂ ಪ್ರಸಾ ದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಚಂದ್ರಹಾಸ ರೈ, ನಾರಾಯಣ ಮಣಿ ಯಾಣಿ ನೀರ್ಚಾಲು, ಗಂಗಾಧರ ಗೋಳಿಯಡ್ಕ, ಚಂದ್ರಹಾಸ, ಶಾಫಿ ಗೋಳಿಯಡ್ಕ, ಅನಸೂಯ ಮಾನ್ಯ, ಕೃಷ್ಣದಾಸ್ ಬೇಳ, ಕುಮಾರ ನಾಯರ್, ನಾರಾಯಣ ಭಂಡಾರಿ, ವಿನ್ಸೆಂಟ್ ವಿದ್ಯಾಗಿರಿ, ಸತೀಶ್, ಜೋ ನಿ ಕುಂಟಾಲುಮೂಲೆ, ಸೀರಿಯಲ್ ಕ್ರಾಸ್ತಾ, ಜಗನ್ನಾಥ ರೈ, ಶಾಹುಲ್ ಹಮೀದ್ ಭಾಗವಹಿಸಿದರು.