ರೈತ ಸಂಘ ಏರಿಯಾ ಸಮಿತಿಯಿಂದ ಪೈವಳಿಕೆ ಅಂಚೆ ಕಚೇರಿ ಮಾರ್ಚ್
ಪೈವಳಿಕೆ: ರಬ್ಬರಿಗೆ ನ್ಯಾಯಯುತ ಬೆಲೆ ಸಿಗಬೇಕೆಂದು ಆಗ್ರಹಿಸಿ ಪೈವಳಿಕೆ ಅಂಚೆ ಕಚೇರಿಗೆ ರೈತ ಸಂಘ ಏರಿಯಾ ಸಮಿತಿಯಿಂದ ಪ್ರತಿಭಟನೆ ಮಾರ್ಚ್ ನಡೆಸಲಾಯಿತು. ರೈತ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರು ಉದ್ಘಾಟಿಸಿ ದರು. ಅಹಮ್ಮದ್ ಹುಸೈನ್ ಪಿ.ಕೆ. ಅಧ್ಯ ಕ್ಷತೆ ವಹಿಸಿದರು. ಏರಿಯಾ ಕಾರ್ಯ ದರ್ಶಿ ಅಶೋಕ ಭಂಡಾರಿ ಸ್ವಾಗತಿಸಿ, ಸಿಪಿಎಂ ಪೈವಳಿಕೆ ಪಂ. ಸಮಿತಿ ಕಾರ್ಯ ದರ್ಶಿ ಚಂದ್ರ ನಾಯ್ಕ್ ಮಾತನಾಡಿ ದರು. ಶ್ರೀನಿವಾಸ ಭಂಡಾರಿ, ಅಬ್ದುಲ್ಲ ರಹ್‌ಮತ್, ಕರುಣಾಕರ ಶೆಟ್ಟಿ, ಚಂದ್ರಾ ವತಿ ಕುಳೂರು, ವಿನಯ ಬಾಯಾರು, ಲತೀಫ್ ಬಿ.ಎ. ನೇತೃತ್ವ ನೀಡಿದರು.