ರೈಲು ನಿಲ್ದಾಣದಲ್ಲಿ ಕೈಕೊಟ್ಟ ವಿದ್ಯುತ್ : ಸಮಸ್ಯೆಗೀಡಾದ ಪ್ರಯಾಣಿಕರು
ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣದಲ್ಲಿ ನಿನ್ನೆ ಸಂಜೆ ಪ್ರಯಾಣಿಕರು ಕಿಕ್ಕಿರಿದಿರುವಾಗಲೇ ಅರ್ಧ ಗಂಟೆ ಕಾಲ ವಿದ್ಯುತ್ ಮೊಟಕುಗೊಂಡಿರುವುದು ತೀವ್ರ ಸಮಸ್ಯೆಗೆ ಕಾರಣವಾಯಿತು. ಸಂಜೆ ಆರೂವರೆ ಗಂಟೆಗೆ ಮಲಬಾರ್ ಎಕ್ಸ್ಪ್ರೆಸ್ ಬರುವ ಹೊತ್ತಿನಲ್ಲೇ ವಿದ್ಯುತ್ ಮೊಟಕುಗೊಂಡಿದೆ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆಗೀಡಾದರು. ಕಚೇರಿ, ಟಿಕೆಟ್ ಕೌಂಟರ್ ಸಹಿತ ಎಲ್ಲೆಡೆ ಕತ್ತಲೆ ಆವರಿಸಿಕೊಂಡಿದ್ದು, ಇದರಿಂದ ಪ್ರಯಾಣಿಕರು ಮೊಬೈಲ್ ಬೆಳಕಲ್ಲೇ ಅತ್ತಿತ್ತ ತೆರಳಬೇಕಾಗಿ ಬಂತು.