ರೈಲು ನಿಲ್ದಾಣದ ಫ್ಲಾಟ್ ಫಾರ್ಮ್‌ನಿಂದ 5.953 ಕಿಲೋ ಗಾಂಜಾ ವಶ; ಬಾಯಿಕಟ್ಟೆ ನಿವಾಸಿ ಸೆರೆ
ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣದಲ್ಲಿ ರೈಲ್ವೇ ಪೊಲೀಸ್ ಠಾಣೆ ಎಸ್‌ಐ ರೆಜಿ ಕುಮಾರ್ ನೇತೃತ್ವದ ತಂಡ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ 5.953 ಕಿಲೋ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಪೈವಳಿಕೆ ಬಾಯಿಕಟ್ಟೆ ಮಂಜತ್ತೋಡಿ ಹೌಸ್‌ನ ಅರುಣ್ ಕುಮಾರ್ (27) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಿನ್ನೆ ಸಂಜೆ ಕಾಸರಗೋಡು ರೈಲು ನಿಲ್ದಾಣ ಫ್ಲಾಟ್ ಫಾರ್ಮ್‌ನಲ್ಲಿ ನಿನ್ನೆ ಸಂಜೆ ಆರೋಪಿ ಶೋಲ್ಡರ್ ಬ್ಯಾಗ್‌ನೊಂದಿಗೆ ತಿರುಗಾಡುತ್ತಿದ್ದುದನ್ನು ಗಮನಿಸಿ ಶಂಕೆಗೊಂಡು ಆತನನ್ನು ತಡೆದು ನಿಲ್ಲಿಸಿ ಬ್ಯಾಗ್ ತಪಾಸಣೆಗೊಳಪಡಿಸಿದಾಗ ಅದರೊಳಗೆ ಹಲವು ಪ್ಯಾಕೆಟ್‌ಗಳಲ್ಲಿ ತುಂಬಿಸಿದ್ದ ಗಾಂಜಾ ಪತ್ತೆ ಯಾಗಿದೆಯೆಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ. ತಕ್ಷಣ ಆತನನ್ನು ಮಾಲು ಸಹಿತ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ರೈಲ್ವೇ ಪೊಲೀಸರಾದ ಮಹೇಶ್, ಸನಲ್, ಹಿದಾಯತ್ತುಲ್ಲ, ಶರತ್, ವಿನೋದ್, ಸನೂಪ್ ಹಾಗೂ ಆರ್‌ಪಿಎಫ್‌ನ ಶ್ರೀರಾಜ್ ಎಂಬಿವರು ಒಳಗೊಂಡಿದ್ದರು.