ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನ

ಕಾಸರಗೋಡು: ರೈಲು ಹಳಿಯ ಲ್ಲಿ ಬಾಟಲಿ ಮತ್ತು ನಾಣ್ಯಗಳ ನ್ನಿರಿಸಿ ಬುಡಮೇಲುಗೊಳಿಸಲೆತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.

ಕಾಸರಗೋಡು ಪಳ್ಳದ ರೈಲು ಅಂಡರ್ ಪ್ಯಾಸೇಜ್‌ನ ಮೇಲ್ಭಾಗದ ರೈಲು ಹಳಿಯಲ್ಲಿ ಬುಡಮೇಲು ಕೃತ್ಯ ನಡೆಸಲಾಗಿದೆ.  ಪ್ಲಾಸ್ಟಿಕ್ ಬಾಟಲಿ ಮತ್ತು ನಾಣ್ಯಗಳನ್ನು ಸೆಲ್ಲೋಟಾಪ್ ನಲ್ಲಿ ಕಟ್ಟಿ ಅದನ್ನು ರೈಲು ಹಳಿ ಮೇಲೆ ಇರಿಸಲಾಗಿತ್ತು. ಇದರ ಮೇಲೆ ರೈಲು  ಹಾದು ಹೋಗಿದ್ದು ಆ ಬಳಿಕವಷ್ಟೇ ವಿಷಯ ರೈಲ್ವೇ ಸಿಬ್ಬಂದಿಗಳ ಗಮನಕ್ಕೆ ಬಂದಿದೆ. ಈ ಬಗ್ಗೆ ರೈಲ್ವೇ ಸೀನಿಯರ್ ಸೆಕ್ಷನ್ ಇಂಜಿನಿ ಯರ್ ಎಂ. ರಂಜಿ ತ್ ನೀಡಿದ ದೂರಿನಂತೆ ಕಾಸರ ಗೋಡು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.ಕಾಸರಗೋಡು ಪೊಲೀಸ್ ಇನ್‌ಸ್ಪೆಕ್ಟರ್ ಪಿ. ನಳಿನಾಕ್ಷನ್  ನೇತೃ ತ್ವದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರೈಲು ಹಳಿ ಮೇಲೆ ಈ ಸಾಮಗ್ರಿಗಳನ್ನು ಇರಿಸಿದ ವರನ್ನು ಗುರುತುಹಚ್ಚಲು ಆ ಪರಿಸರದ ಸಿಸಿ ಟಿವಿ ದೃಶಗಳನ್ನು ಪೊಲೀಸರು ಪರಿಶೀಲಿಸತೊಡಗಿದ್ದಾರೆ.

RELATED NEWS

You cannot copy contents of this page