ರೈಲ್ವೇ ಗೇಟ್‌ಗೆ ರಿಕ್ಷಾ ಢಿಕ್ಕಿ: ತಪ್ಪಿದ ಅಪಾಯ
ಉಪ್ಪಳ: ಹೊಸಂಗಡಿ ರೈಲ್ವೇ ಗೇಟ್‌ಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದು ಹಾನಿಗೀಡಾಗಿದೆ. ನಿನ್ನೆ ಬೆಳಿಗ್ಗೆ 11.30ರ ವೇಳೆ ಬಂಗ್ರಮಂ ಜೇಶ್ವರದಿಂದ ಹೊಸಂಗಡಿ ಪೇಟೆಗೆ ತೆರಳುತ್ತಿದ್ದ ರಿಕ್ಷಾ ಅಪಘಾತಕ್ಕೀ ಡಾಗಿದೆ. ಅದೃಷ್ಟವಶಾತ್ ಯಾರೂ ಗಾಯಗೊಂಡಿಲ್ಲ. ರೈಲುಗಾಡಿ ಯೊಂದು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಸೈರನ್ ಮೊಳಗಿಸಿ ರೈಲ್ವೇ ನೌಕರರು ಗೇಟ್ ಮುಚ್ಚುಗಡೆಗೊಳಿ ಸುತ್ತಿದ್ದಂತೆ ಆಟೋ ರಿಕ್ಷಾ ಸಂಚರಿಸಿದೆ. ಘಟನೆಯಿಂದ ರಿಕ್ಷಾ ಹಾಗೂ ಗೇಟ್ ಹಾನಿಗೀಡಾಗಿದೆ. ಮಂ ಗಳೂರಿನಿಂದ ಸೀನಿಯರ್ ಸೆಕ್ಷನ್ ಇಂಜಿನಿಯರ್ ಗೋವಿಂದ ನಾಯ್ಕ್ ನೇತೃತ್ವದಲ್ಲಿ ರೈಲ್ವೇ ಪೊಲೀಸರು ತಲುಪಿ ಪರಿಶೀಲನೆ ನಡೆಸಿದರು.