ಲಂಚ ಸ್ವೀಕಾರ ದೂರು: ಬಂಧಿತ ಪ್ರೊಫೆಸರ್‌ಗೆ ನ್ಯಾಯಾಂಗ ಬಂಧನ, ಸೇವೆಯಿಂದ ಅಮಾನತು
ಕಾಸರಗೋಡು: ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಅಧ್ಯಾಪಕ ನೇಮಿಸುವ ಒಪ್ಪಂದದ ನವೀಕರಣೆ ಹಾಗೂ ಪಿಎಚ್‌ಡಿಗೆ ಪ್ರವೇಶ ಖಾತರಿಪಡಿಸುವ ಹೆಸರಲ್ಲಿ ಲಂಚ ಸ್ವೀಕರಿಸಿದ ಆರೋಪದಂತೆ ವಿಜಿಲೆನ್ಸ್ ತಂಡದಿಂದ ಬಂಧಿತರಾದ ಪ್ರಸ್ತುತ ವಿಶ್ವವಿದ್ಯಾಲ ಯದ ಪ್ರಾಧ್ಯಾಪಕ ಪ್ರೊಫೆಸರ್ ಎ.ಕೆ. ಮೋಹನ್‌ರನ್ನು ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಮೋಹನ್‌ರನ್ನು ವಿಜಿಲೆನ್ಸ್ ತಂಡ ನಿನ್ನೆ ತಲಶ್ಶೇರಿ ವಿಜಿಲೆನ್ಸ್ ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಲಯದ ಆದೇಶ ಪ್ರಕಾರ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಲಂಚ ಆರೋಪಕ್ಕೆ ಸಂಬಂಧಿಸಿ ಬಂಧಿತರಾದ ಹಿನ್ನೆಲೆಯಲ್ಲಿ ಪ್ರೊ. ಮೋಹನನ್‌ರನ್ನು ಕೇಂದ್ರೀಯ ವಿಶ್ವ ವಿದ್ಯಾಲಯದ ಉಪ ಕುಲಪತಿಯ ಉಸ್ತುವಾರಿ ಹೊಣೆಗಾರಿಕೆ ಹೊಂದಿರುವ ಪ್ರೊ. ಕೆ.ಸಿ. ಬೈಜು ಅವರು ಇದೇ ಸಂದರ್ಭದಲ್ಲಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.