ಲಾರಿಯಲ್ಲಿ ಅಕ್ರಮ ಸಾಗಾಟ: ಮರದ ದಿಮ್ಮಿಗಳು ವಶ
ಕಾಸರಗೋಡು: ಮಿನಿ ಲಾರಿ ಯೊಂದರಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ೬೫ ಮರದ ದಿಮ್ಮಿಗಳನ್ನು ಅರಣ್ಯ ಇಲಾ ಖೆಯ ತಂಡ ವಶಕ್ಕೆ ತೆಗೆದು ಕೊಂಡಿದೆ. ಪೊಯಿನಾಚಿ- ಬಂದಡ್ಕ ರಸ್ತೆಯ ಪರಂಬಿನಲ್ಲಿ ಈ ಮಾಲು ಪತ್ತೆಹಚ್ಚಿ ವಶಪಡಿಸ ಲಾಗಿದೆ. ಅರಣ್ಯ ಇಲಾಖೆಯ ಫ್ಲೈಯಿಂಗ್ ಸ್ಕ್ವಾಡ್ ರೇಂಜ್ ಫೋರೆಸ್ಟ್ ಆಫೀಸರ್ ವಿ. ರತೀಶನ್‌ರ ನೇತೃತ್ವದ ತಂಡ ಈ ಕಾರ್ಯಾ ಚರಣೆ ನಡೆಸಿದೆ. ಇದಕ್ಕೆ ಸಂಬಂಧಿಸಿ ಮಿನಿ ಲಾರಿಯ ಮೂಲಕ ಬೇತೂರು ಪಾರ ಪಳ್ಳಂಜಿಯ ಕೆ.ಎಸ್. ನಿಝಾರ್‌ನ ವಿರುದ್ಧ ಕೇರಳ ಅರಣ್ಯ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ವಶಪಡಿಸಲಾದ ಮಾಲುಗಳನ್ನು ಬಳಿಕ ಹೆಚ್ಚಿನ ತನಿಖೆಗಾಗಿ ಕಾಸರಗೋಡು ಅರಣ್ಯ ರೇಂಜ್ ಅಧಿಕಾರಿಗೆ ಹಸ್ತಾಂತರಿಸ ಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಎಂ. ಹರಿ, ಕೆ.ವಿ. ವೀಣ, ಮತ್ತು ಚಾಲಕ ಪಿ. ಪ್ರದೀಪ್ ಕುಮಾರ್ ಎಂಬವರು ಒಳಗೊಂಡಿದ್ದರು.