ಲಾರಿಯಿಂದ ಡೀಸೆಲ್ ಕಳವುಗೈದು ಮಾರಾಟ: ಚಾಲಕನ ಸೆರೆ
ಕುಂಬಳೆ: ಲಾರಿಯಿಂದ ಸ್ವತಃ ಚಾಲಕನೇ ಡೀಸೆಲ್ ಕಳವುಗೈದು ಜೆಸಿಬಿ ಚಾಲಕನಿಗೆ ಮಾರಾಟ ಮಾಡಿದ ಬಗ್ಗೆ ದೂರಲಾಗಿದೆ. ಈ ಸಂಬಂಧ ಲಾರಿ ಚಾಲಕ ತಮಿಳುನಾಡು ಮೇಟೂರ್ ಸೇಲಂ ನಿವಾಸಿ ಶಿವಕುಮಾರ್ (34) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಶಿವಕುಮಾರ್ ನಿನ್ನೆ ಸಿಮೆಂಟ್ ಮಿಕ್ಸಿಂಗ್ ಲಾರಿ ಸಹಿತ ಸೀತಾಂಗೋಳಿಗೆ ಬಂದಿದ್ದನು. ಲಾರಿ ಶಾಂತಿಪಳ್ಳಕ್ಕೆ ತಲುಪಿದಾಗ ಅದರಿಂದ 30 ಲೀಟರ್ ಡೀಸೆಲ್ ತೆಗೆದು ಜೆಸಿಬಿಯೊಂದರ ಚಾಲಕನಿಗೆ ಮಾರಾಟಗೈದಿದ್ದನೆನ್ನಲಾಗಿದೆ. ಈ ವಿಷಯವನ್ನು ಲಾರಿಯ ಮಾಲಕ ತಮಿಳುನಾಡಿನ ಮೇಟೂರು ನವಪ್ಪೆಟ್ಟಿಯ ಆನಂದ್‌ರಿಗೆ ಯಾರೋ ತಿಳಿಸಿದ್ದಾರೆ. ಅವರು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಶಿವಕುಮಾರ್‌ನನ್ನು ಬಂಧಿಸಿದ್ದಾರೆ.