ಲಾರಿ ಢಿಕ್ಕಿ ಹೊಡೆಸಿ ಸ್ಕೂಟರ್ ಸವಾರನ ಕೊಲೆಗೈಯ್ಯಲೆತ್ನ: ತಾಸುಗಳೊಳಗಾಗಿ ಆರೋಪಿಯನ್ನು ಸೆರೆಹಿಡಿದ ಪೊಲೀಸರು
ಕಾಸರಗೋಡು: ಲಾರಿ ಢಿಕ್ಕಿ ಹೊಡೆಸಿ ಸ್ಕೂಟರ್ ಸವಾರನನ್ನು ಕೊಲೆಗೈಯ್ಯಲೆತ್ನಿಸಿದ ಆರೋಪಿ ಯನ್ನು ಘಟನೆ ನಡೆದ ಕೆಲವೇ ತಾಸುಗಳೊಳಗಾಗಿ ಪೊಲೀಸರು ಲಾರಿ ಸಹಿತ ಬಂಧಿಸಿದ ಘಟನೆ ನಡೆದಿದೆ.
ಎಡನೀರು ಚಾಪಾಡಿ ನಿವಾಸಿ ಅಬ್ದುಲ್ಲ ಕುಂಞಿ (52) ಬಂಧಿತ ಆರೋಪಿ. ವಿದ್ಯಾನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಯು.ಪಿ. ವಿಪಿನ್ ನೇತೃತ್ವದಲ್ಲಿ ಎಸ್.ಐ ಅಜೀಶ್ ವಿ.ವಿ, ಎಸ್‌ಐ ಬಿಜು, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ರೋಜನ್ ಪಿ, ಪ್ರಶಾಂತ್ ಆರ್ ಮತ್ತು ಸನೂಪ್ ಎಂಬವರನ್ನೊಳ ಗೊಂಡ ಪೊಲೀಸರ ತಂಡ ಮಂಗ ಳೂರು ಸಮೀಪದ ಸುರತ್ಕಲ್‌ನಿಂದ ಆರೋಪಿಯನ್ನು ಬಂಧಿಸಿದೆ.
ಎಡನೀರು ಚಾಪಾಡಿ ಬಲ್ಕೀಸ್ ಹೌಸ್‌ನ ಅಬ್ದುಲ್ ರಹಮಾನ್ (೬೫) ಎಂಬವರು ನಿನ್ನೆ ಬೆಳಿಗ್ಗೆ ಸ್ಕೂಟರ್‌ನಲ್ಲಿ ಮಸೀದಿಗೆ ಹೋಗು ತ್ತಿದ್ದ ವೇಳೆ ಮೇಲಿನ ಎಡನೀರಿನಲ್ಲಿ ಆ ಸ್ಕೂಟರ್‌ಗೆ ಲಾರಿ ಢಿಕ್ಕಿ ಹೊಡೆಸಿ ಕೊಲೆಗೈಯ್ಯಲೆತ್ನಿಸಿದ ದೂರಿನಂತೆ ಆರೋಪಿ ಅಬ್ದುಲ್ಲ ಕುಂಞಿ ವಿರುದ್ಧ ವಿದ್ಯಾನಗರ ಪೊಲೀ ಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಆದೂರು ಪೊಲೀಸ್ ಠಾಣೆಯಲ್ಲಿ ಇತರ ಮೂರು ಕೇಸುಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ.
ಎಡನೀರು ಮೇಲಿನ ಎಡನೀರಿನಲ್ಲಿ ಅಬ್ದುಲ್ ರಹಿಮಾನ್‌ರ ಮೇಲೆ ಆರೋಪಿ ನಿನ್ನೆ ಬೆಳಿಗ್ಗೆ ಲಾರಿ ಹತ್ತಿಸಿ ಗಂಭೀರ ಗಾಯಗೊಳಿಸಿದ್ದನು. ಬಳಿಕ ಲಾರಿಯನ್ನು ರಿವರ್ಸ್ ತೆಗೆಯುವ ವೇಳ ಅದು ಅಲ್ಲೇ ಪಕ್ಕದ ಮೊಹಮ್ಮದ್ ಕುಂಞಿ ಎಂಬವರ ಹಿತ್ತಿಲ ಆವರಣಗೋಡೆಗೆ ಬಡಿದು ಗೋಡೆ ಕುಸಿದುಬಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲಿಂದ ಆರೋಪಿ ಲಾರಿ ಸಹಿತ ನೇರವಾಗಿ ಸುರತ್ಕಲ್‌ಗೆ ಪಲಾಯನಗೈದಿದ್ದಾನೆ. ಆ ಬಗ್ಗೆ ಖಚಿತ ಮಾಹಿತಿ ಲಭಿಸಿದ ವಿದ್ಯಾನಗರ ಪೊಲೀಸರ ತಂಡ ತಕ್ಷಣ ಅಲ್ಲಿಗೆ ಸಾಗಿ ಆರೋಪಿಯನ್ನು ಘಟನೆ ನಡೆದ ಕೆಲವೇ ತಾಸುಗಳೊಳಗಾಗಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಢಿಕ್ಕಿ ಹೊಡೆದ ಲಾರಿಯನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡು ವಿದ್ಯಾನಗರ ಠಾಣೆಗೆ ಸಾಗಿಸಿದ್ದಾರೆ.
ಲಾರಿ ಢಿಕ್ಕಿ ಹೊಡೆದು ಗಾಯ ಗೊಂಡ ಅಬ್ದುಲ್ ರಹಮಾನ್‌ರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿ ಲಾಗಿದೆ. ಅವರು ಮತ್ತು ಆರೋಪಿ ನಡುವೆ ಆಸ್ತಿ ಹಾಗೂ ದಾರಿ ವಿವಾದ ವಿದೆಯೆಂದೂ ಅದುವೇ ಆರೋಪಿ ಈ ದುಷ್ಕೃತ್ಯವೆಸಗಲು ಕಾರಣವಾಗಿದೆ ಯೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.