ಲಿಫ್ಟ್ ಇರಿಗೇಶನ್ ವಿದ್ಯುತ್ ಕಡಿತ: ಸಂಪರ್ಕ ಪುನರ್ಸ್ಥಾಪಿಸಲು ಮನವಿ
ಕುಂಬಳೆ: ಮಂಗಲ್ಪಾಡಿ ಪಂಚಾಯತ್ನ ಪಚ್ಚಂಬಳ ವಾರ್ಡ್ ಕಲ್ಪಾರ ಎಂಬ ಸ್ಥಳದಲ್ಲಿ ವರ್ಷಗಳ ಹಿಂದೆ ನಿರ್ಮಿಸಿದ ಲಿಫ್ಟ್ ಇರಿಗೇಶನ್ಗೆ ಯಾವುದೇ ಮುನ್ನೆಚ್ಚರಿಕೆ ನೀಡದೆ ವಿದ್ಯುತ್ ಸಂಪರ್ಕ ವಿಚ್ಛೇಧಿಸಿದ ಬಗ್ಗೆ ಮಂಗಲ್ಪಾಡಿ ಪಂಚಾಯತ್ ಸದಸ್ಯ ಮಜೀದ್ ಪಚ್ಚಂಬಳರ ನೇತೃತ್ವದಲ್ಲಿ ಶಾಸಕ ಎಕೆಎಂ ಅಶ್ರಫ್ರಿಗೆ ಮನವಿ ನೀಡಲಾಯಿತು. ವಿದ್ಯುತ್ ವಿಚ್ಛೇಧ ನದಿಂದಾಗಿ ಪ್ರದೇಶದ ಹಲವಾರು ಮನೆಗಳಿಗೆ ಸಮಸ್ಯೆ ಸಹಿತ ೧೫೦ ಎಕರೆಯಷ್ಟು ಕೃಷಿ ನಾಶವಾಗುವ ಹಂತಕ್ಕೆ ತಲುಪಿದ್ದು, ಈ ಸ್ಥಿತಿಗೆ ಪರಿಹಾರ ಉಂಟಾಗಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಇರಿಗೇಶನ್ ವಿಭಾಗ ಈ ಯೋಜನೆಯನ್ನು ವಹಿಸಿಕೊಂಡು ಪ್ರತ್ಯೇಕ ಮೊತ್ತ ಮೀಸಲಿಟ್ಟು, ವಿದ್ಯುತ್ ಸಂಪರ್ಕವನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಅಶ್ರಫ್ ಪಚ್ಚಂಬಳ, ಲತೀಫ್ ಮೀಪಿರಿ, ಕೆ.ಪಿ. ಅಬ್ದುಲ್ ರಹಿಮಾನ್, ಮೊಯ್ದೀನ್ ಎಂಬಿವರು ತಂಡದಲ್ಲಿದ್ದರು.