ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆಯಿಂದ ಸುಳ್ಳು ದೂರು ಕೊಡಿಸಿ ಹಣ ಎಗರಿಸಲೆತ್ನಿಸಿದ ಸೂತ್ರಧಾರನ ಸೆರೆ
ಕಾಸರಗೋಡು: ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆಯೋರ್ವಳಿಂದ ಪೊಲೀಸರಿಗೆ ಸುಳ್ಳು ದೂರು ಕೊಡಿಸಿ ಆ ಮೂಲಕ ಹಣ ಎಗರಿಸಲೆತ್ನಿಸಿದ ಪ್ರಕರಣದ ಸೂತ್ರಧಾರನನ್ನು ಮಾಹಿ ಪೊಲೀಸರು ಬಂಧಿಸಿದ್ದಾರೆ.
ಹೊಸದುರ್ಗ ಕಾರಕೆಡುವಟ್ಟ ಪಳ್ಳಿ ವೀಟಿಲ್ನ ಮುಹಮ್ಮದ್ ಇಕ್ಬಾಲ್ ಅಲಿಯಾಸ್ ಶಿವಶಂಕರ (೬೧) ಎಂಬಾತ ಬಂಧಿತನಾದ ಆರೋಪಿ. ಈತ ತನ್ನ ಪತ್ನಿಯೆಂಬ ಸೋಗಿನಲ್ಲಿ ೬೩ ವರ್ಷದ ಮಹಿಳೆಯೋರ್ವ ಳೊಂದಿಗೆ ಮಾಹಿಗೆ ಹೋಗಿ ಅಲ್ಲಿನ ವಸತಿಗೃಹವೊಂದರಲ್ಲಿ ಮೂರು ದಿನ ತಂಗಿದ್ದನು. ಅಲ್ಲಿ ಆ ಮಹಿಳೆಗೆ ಆ ವಸತಿಗೃಹದ ರೂಮ್ನಲ್ಲಿ ಮೂರು ದಿನ ತಂಗಿದ್ದನು. ಆ ವೇಲೆ ಅಲ್ಲಿ ಆ ಮಹಿಳೆಗೆ ರೂಮ್ ಬಾಯ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಆ ಮಹಿಳೆ ಮೂಲಕ ಆರೋಪಿ ಆರೋಪಿ ಮಾಹಿ ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಆ ದೂರಿನ ಬಗ್ಗೆ ಪೊಲೀಸರು ನಡೆಸಿದ ತನಿಖೆಯಲ್ಲಿ ಅದು ಸುಳ್ಳು ದೂರು ಆಗಿತ್ತೆಂದೂ ಸ್ಪಷ್ಟಗೊಂಡಿದೆ. ಆರೋಪಿ ಮೊಹಮ್ಮದ್ ಇಕ್ಬಾಲ್ನ ಜತೆಗಿದ್ದ ಮಹಿಳೆ ಆತನ ಪತ್ನಿಯಾಗಿರಲಿಲ್ಲ. ಆಕೆಯ ನಿಜವಾದ ಪತಿ ಇತ್ತೀಚೆಗೆ ನಾಪತ್ತೆಯಾಗಿದ್ದನು. ಬಳಿಕ ಆರೋಪಿ ಆ ಮಹಿಳೆಯನ್ನು ಪರಿಚಯಗೊಂಡು ಆಕೆಗೆ ಸಂರಕ್ಷಣೆ ಒದಗಿಸುವುದಾಗಿ ಹೇಳಿ ಆಕೆಯ ಜತೆ ಸಂಗ ಬೆಳೆಸಿಕೊಂಡಿದ್ದನು. ಆಕೆಯಿಂದ ಸುಳ್ಳು ದೂರು ಕೊಡಿಸಿ, ಆ ಮೂಲಕ ರೂಮ್ ಬಾಯ್ಯಿಂದ ಆರೋಪಿ ಹಣ ಎಗರಿಸಲೆತ್ನಿಸಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಇದೇ ರೀತಿ ಈ ಹಿಂದೆ ತೃಶೂರಿನ ಕುಟುಂಬವೊಂದನ್ನು ಬೆದರಿಸಿ ಹಣ ಎಗರಿಸಿದ್ದನು. ಮಾತ್ರವಲ್ಲ ಆತ ತನ್ನ ಜತೆಗಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿ ಆಕೆಗೆ ಬೆದರಿಕೆಯನ್ನು ಒಡ್ಡಿದ್ದಾನೆ. ಗಂಭೀರ ಗಾಯಗೊಂಡ ಆಕೆಯನ್ನು ಬಳಿಕ ಕಣ್ಣೂರು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.