ಲೈಫ್ ಯೋಜನೆ ಬುಡಮೇಲು ರಾಜ್ಯ ಸರಕಾರದ ಸಾಧನೆ- ಬಿಜೆಪಿ
ವರ್ಕಾಡಿ: ಹಣಕಾಸಿನ ಅಸ್ಥಿರತೆಯಲ್ಲಿ ಪಿಣರಾಯಿ ಸರಕಾರ ರಾಜ್ಯವನ್ನು ದಿವಾಳಿ ಮಾಡಿದೆ. ದಿವಾಳಿ ಆಗಿರುವ ರಾಜ್ಯದಲ್ಲಿ ಜನಪರ ಯೋಜನೆಗಳು ಬುಡ ಮೇಲು ಆಗುತ್ತಿದೆ. ಲೈಫ್ ಯೋಜನೆಯೇ ಹಣವಿಲ್ಲದೆ ಸ್ಥಗಿತ ವಾಗುವ ಹಂತದಲ್ಲಿದೆ. ಮೊದಲ ಕಂತು ನೀಡಿ, ಮನೆ ನಿರ್ಮಾಣಕ್ಕೆ ಆರಂಭವಾದ ಬಳಿಕ ಹಣ ಬಿಡುಗಡೆ ಮಾಡದೆ ಫಲÁನುಭವಿಗಳು ಮನೆ ಕಟ್ಟಲು ಆಗದೆ ಸಂಕಷ್ಟ ಪಡುತ್ತಿದೆ ಎಂದು ಬಿಜೆಪಿ ದೂರಿದೆ. 5 ಲಕ್ಷ ಕಿಂತ ಮೊತ್ತ ಟ್ರೆಷರಿಯಲ್ಲಿ ನಗದು ಮಾಡಲಾಗುತ್ತಿಲ್ಲ.
ಉದ್ಯೋಗಸ್ಥರಿಗೆ ಸಂಬಳವೆ ಪೂರ್ತಿ ಸಿಗುತ್ತಿಲ್ಲ. ಕೆಎಸ್Àಆರ್‌ಟಿಸಿ ನಷ್ಟದಲ್ಲಿದೆ ಎಂದು ಬಿಜೆಪಿ ವಾರ್ಕಡಿ ಪಂಚಾಯತ್ ಸಮಿತಿ ಆರೋಪಿಸಿದೆ. ನವ ಕೇರಳ ಎಂದು ಮಂತ್ರಿಮAಡಲ ಸಭೆ ನಡೆಸುವುದು ವಂಚನೆಯಭಾಗ ಎಂದು ಬಿಜೆಪಿ ಆರೋಪಿಸಿದ್ದÄ ಕಾರ್ಯಕ್ರಮ ಬಹಿಷ್ಕರಿ ಸಲು ತೀರ್ಮಾನಿಸಿದೆ. ಮಂಜೇಶ್ವರ ಶಾಸಕರು ಅಭಿವೃದ್ಧಿ ಬೇಕಾದ ಯೋಜನೆಗಳನ್ನು ಮಾಡುತ್ತಿಲ್ಲ ಕೇವಲ ಭಾಷಣ ದಲ್ಲಿಯೇ ಜನರನ್ನು ವಂZಸÀÄತ್ತಿದ್ದಾರೆAದು ಬಿಜೆಪಿ ಲೇವಡಿ ಮಾಡಿದೆ. ಪಂಚಾಯತ್ ಸಮಿತಿ ಅಧ್ಯಕ್ಷ ದೂಮಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಆದರ್ಶ್ ಬಿ ಎಂ ಪಕ್ಷದ ಕಾರ್ಯಕ್ರಮ ಗಳ ವಿವರ ನೀಡಿದರು. ಮುಖಂಡರಾದ ಅಶ್ವಿನಿ ಎಂ ಎಲ್, ತುಳಸಿ ಕುಮಾರಿ, ಯತೀರಾಜ್ ಕೆದುಂಬಾಡಿ, ರವಿರಾಜ್, ಚಂದ್ರಹಾಸ ಪೂಜಾರಿ, ಭಾಸ್ಕರ್ ವಿವೇಕಾನಂದ, ಸದಾಶಿವ ನಾಯ್ಕ್ ಉಪಸ್ಥಿತರಿದ್ದರು. ಭಾಸ್ಕರ ಪೊಯ್ಯ ಸ್ವಾಗತಿಸಿ, ವಂದಿಸಿದರು.