ಲೋಕಸಭಾ ಚುನಾವಣೆ: ಎಲ್ಲರೂ ಶುಭ ನಿರೀಕ್ಷೆಯಲ್ಲಿ; ಚೊಚ್ಚಲ ಮತದಾರರು ನಿರ್ಣಾಯಕ
ಕಾಸರಗೋಡು: ಲೋಕಸಭಾ ಚುನಾವಣೆಯ ಎರಡು ಹಂತದ ಮತದಾನ ಈಗಾಗಲೇ ಮುಗಿದಿ ರುತ್ತದೆ. ಮೂರನೇ ಹಂತದ ಮತ ದಾನ ಮೇ 7ರಂದು ನಡೆಯ ಲಿದೆ. ಮೊದಲ ಹಾಗೂ ಎರಡನೇ ಹಂತ ದಲ್ಲಿ ಕೇರಳದ 20 ಸೇರಿದಂತೆ 191 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಇನ್ನು ಐದು ಹಂತಗಳಲ್ಲಾಗಿ 351 ಕ್ಷೇತ್ರಗಳ ಮತದಾನ ನಡೆಯಲು ಬಾಕಿಯಿದೆ. ಮೂರನೇ ಹಂತ ದಲ್ಲಿ 12 ರಾಜ್ಯಗಳ 94 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿರುವುದು. ಒಟ್ಟು 542 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಜೂನ್ 4ರಂದು ನಡೆಯಲಿದೆ. ಗುಜ ರಾತ್ನ ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಇದೇ ವೇಳೆ ಕೇರಳದ 20 ಲೋಕಸಭಾ ಕ್ಷೇತ್ರಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಲಭಿಸಲಿದೆಯೆಂದು ತಿಳಿಯಬೇಕಾದರೆ ಇನ್ನು ಒಂದು ತಿಂಗಳು ಕಾಯಬೇಕು. 20 ಲೋಕಸಭಾ ಕ್ಷೇತ್ರಗಳಲ್ಲೂ ಎಲ್ಡಿಎಫ್, ಯುಡಿಎಫ್ ಹಾಗೂ ಎನ್ಡಿಎ ಅಭ್ಯರ್ಥಿಗಳ ಮಧ್ಯೆ ತ್ರಿಕೋನ ಸ್ಪರ್ಧೆ ನಡೆದಿರುತ್ತದೆ.
ಈ ಪೈಕಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಯಾರಿಗಾಗಿರಬಹುದೆಂಬ ಕುತೂಹಲ ಮತದಾರರಲ್ಲಿ ಕಾಡುತ್ತಿದೆ.
ಇದೇ ವೇಳೆ ಗೆಲುವು ನಮ್ಮದೇ ಎಂದು ಮೂರೂ ಒಕ್ಕೂಟಗಳು ಅಭಿಪ್ರಾಯವ್ಯಕ್ತಪಡಿ ಸುತ್ತಿವೆಯಾದರೂ ಒಳಗೊಳಗೆ ಆತಂಕ ಇರುವುದನ್ನು ಅಲ್ಲಗಳೆಯಲಾಗದು.
ಕಾಸರಗೋಡಿನಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಎಂ.ಎಲ್. ಅಶ್ವಿನಿ, ಎಲ್ಡಿಎಫ್ ನಿಂದ ಸಿಪಿಎಂನ ಎಂ.ವಿ. ಬಾಲಕೃಷ್ಣನ್ ಮಾಸ್ತರ್, ಯುಡಿಎಫ್ನಿಂದ ಕಾಂಗ್ರೆಸ್ನ ರಾಜ್ ಮೋಹನ್ ಉಣ್ಣಿತ್ತಾನ್ ಸಹಿತ ಸ್ವತಂ ತ್ರರೂ ಸೇರಿ 9 ಮಂದಿ ಸ್ಪರ್ಧಿಸಿದ್ದರು. ಇವರ ಪೈಕಿ ಗೆಲುವಿನ ಹಾರ ಯಾರಕೊರಳಿಗೆ ಬೀಳಲಿದೆ ಎಂಬುವುದು ಕುತೂಹಲಕ್ಕೆ ಎಡೆಮಾಡಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 76.04 ಶೇ. (1104331 ಮಂದಿ) ಮತ ಚಲಾವಣೆಯಾಗಿದೆ. ಮತದಾನ ನಡೆದ ಎಪ್ರಿಲ್ 26ರಿಂದ ವಿವಿಧ ರಾಜಕೀಯ ಪಕ್ಷಗಳು ಲೆಕ್ಕಾಚಾರದಲ್ಲಿ ತೊಡಗಿಕೊಂಡಿವೆ. ಪ್ರತೀ ಮತಗಟ್ಟೆಗಳಲ್ಲಿ ನಡೆದ ಮತದಾನದ ಲೆಕ್ಕಾಚಾರಗಳನ್ನು ಪರಿಶೀಲಿಸಿದ ಬಳಿಕ ಗೆಲುವು ಬಗ್ಗೆ ನಿರೀಕ್ಷೆಯನ್ನು ಹೊಂದಿವೆ.
ಈ ಬಾರಿಯೂ ರಾಜ್ಮೋಹನ್ ಉಣ್ಣಿತ್ತಾನ್ಗೆ 15 ಸಾವಿರದಷ್ಟು ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆಂದು ಯುಡಿಎಫ್ ಮೂಲಗಳು ಅಭಿ ಪ್ರಾಯಪಡುತ್ತಿವೆ. ಇದೇ ವೇಳ 15 ಸಾವಿರದಿಂದ 30 ಸಾವಿರದ ಮಧ್ಯೆ ಮತಗಳ ಅಂತರದಲ್ಲಿ ಎಂ. ವಿ. ಬಾಲಕೃಷ್ಣನ್ ಮಾಸ್ತರ್ ಗೆಲುವು ಸಾಧಿಸಲಿದ್ದಾರೆಂದು ಎಲ್ಡಿಎಫ್ ಮೂಲಗಳು ಹೇಳುತ್ತಿವೆ. ಇದೇ ಸಂದರ್ಭದಲ್ಲಿ ಎಂ.ಎಲ್. ಅಶ್ವಿನಿಯವರು ಗೆಲುವು ಸಾಧಿಸಲಿದ್ದಾರೆಂದು ಎನ್ಡಿಎ ನೇತಾರರೂ ಹೇಳುತ್ತಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ರಾಜ್ಮೋಹನ್ ಉಣ್ಣಿತ್ತಾನ್ರಿಗೆ 474961 (43.18 ಶೇ.), ಎಲ್ಡಿಎಫ್ ಅಭ್ಯರ್ಥಿ ಕೆ.ಪಿ. ಸತೀಶ್ಚಂ ದ್ರನ್ರಿಗೆ 434523 (39.5ಶೇ.), ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರಿಗೆ 176049 (16 ಶೇ.) ಮತ ಲಭಿಸಿರುತ್ತದೆ.
ಕಾಸರಗೋಡು ಲೋಕಸಭಾ ಕ್ಷೇತ್ರ ಒಳಪಡುವ ಏಳು ವಿಧಾನಸಭಾ ಕ್ಷೇತ್ರಗಳಿಗೆ ಲಭಿಸಿದ ಮತಗಳು ಈ ರೀತಿಯಿದೆ:
ರಾಜ್ ಮೋಹನ್ ಉಣ್ಣಿತ್ತಾನ್ರಿಗೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 68217, ಕಾಸರಗೋಡಿನಲ್ಲಿ 69790, ಉದುಮದಲ್ಲಿ 72324, ಕಾಞಂಗಾಡ್ನಲ್ಲಿ 72,570, ತೃಕರಿಪುರ 74504, ಪಯ್ಯನ್ನೂರು 56730, ಕಲ್ಯಾಶೇರಿಯಲ್ಲಿ 59,848 ಮತಗಳು ಲಭಿಸಿತ್ತು. ಕೆ.ಪಿ. ಸತೀಶ್ಚಂದ್ರನ್ರಿಗೆ ಮಂಜೇಶ್ವರದಲ್ಲಿ 32796, ಕಾಸರಗೋಡು 28567, ಉದುಮ 63387, ಕಾಞಂಗಾಡ್ 74791, ತೃಕರಿಪುರ 76403, ಪಯ್ಯನ್ನೂರು-82861, ಕಲ್ಯಾಶ್ಶೇರಿ 73542 ಮತಗಳು ಲಭಿಸಿತ್ತು. ರವೀಶ ತಂತ್ರಿ ಕುಂಟಾರು ಅವರಿಗೆ ಮಂಜೇಶ್ವರದಲ್ಲಿ 57104, ಕಾಸರಗೋಡು 46630, ಉದುಮ 23786, ಕಾಞಂಗಾಡ್ 20046, ತೃಕರಿಪುರ 8652, ಪಯ್ಯನ್ನೂರು-9268, ಕಲ್ಯಾಶೇರಿಯಲ್ಲಿ 9854 ಮತಗಳು ಲಭಿಸಿತ್ತು. ಈ ಬಾರಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 32827 ಮಂದಿ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಮಂಜೇಶ್ವರ ಲೋಕಸಭಾ ಕ್ಷೇತ್ರದಲ್ಲಿ 4396 ಮಂದಿ, ಕಾಸರಗೋಡು 4039, ಉದುಮ 5081, ಕಾಞಂಗಾಡ್ 4826, ತೃಕರಿಪುರ 4873, ಪಯ್ಯನ್ನೂರು 4640, ಕಲ್ಯಾಶೇರಿಯಲ್ಲಿ 4972 ಮಂದಿ ಹೊಸ ಮತದಾರರಿದ್ದಾರೆ. ಆದ್ದರಿಂದ ಈ ಬಾರಿ ಹೊಸ ಮತದಾರರ ಮತ ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕವಾಗಲಿದೆ ಎಂಬುವುದರಲ್ಲಿ ಸಂಶಯವಿಲ್ಲ.