ಲೋಕಸಭಾ ಚುನಾವಣೆ: ಮಾವೇಲಿಕ್ಕರೆ ಈ ಬಾರಿ ಯಾರ ಜತೆ

ಮಾವೇಲಿಕ್ಕರೆ: ಚಂಗನಾಶ್ಶೇರಿ, ಕುಟ್ಟ ನಾಡು, ಮಾವೇಲಿಕರೆ, ಚೆಂಗನ್ನೂರು, ಕುನ್ನತ್ತೂರು. ಕೊಟ್ಟಾರಕರೆ, ಮತ್ತು ಪತ್ತನಾ ಪುರ ಎಂಬ ಏಳು ವಿಧಾನಸಭಾ ಕ್ಷೇತ್ರ ಗಳು ಒಳಗೊಂಡಿರುವ ಲೋಕಸಭಾ ಕ್ಷೇತ್ರವಾಗಿದೆ ಮಾವೇಲಿಕ್ಕರೆ. ಆಲಪ್ಪುಳ, ಕೋಟಯಂ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ವಿಸ್ತರಿಸಿಕೊಂಡಿರುವ ಕ್ಷೇತ್ರವೂ ಆಗಿದೆ ಇದು. ಕ್ಷೇತ್ರ ಪುನರ್ವಿಂಗಡನೆ  ನಡೆಸಿದ ಬಳಿಕ ನಡೆದ ಮೂರು  ಚುನಾವಣೆ ಗಳಲ್ಲೂ ಇಲ್ಲಿ ಯುಡಿಎಫ್ ಗೆದ್ದಿದೆ. ಕುಟ್ಟನಾಡು ಪ್ಯಾಕೇಜ್, ರಬ್ಬರ್ ಮತ್ತು ಗೋಡಂಬಿ ಕೃಷಿಯಿಂದ  ಸಂಪದ್ಭರಿತ ವಾಗಿರುವ ಮಾವೇಲಿಕ್ಕರೆ ಲೋಕಸಭಾ ಕ್ಷೇತ್ರ ವನ್ಯಜೀವಿಗಳ  ಹಾವಳಿ ಹೊಂದಿರುವ ಪ್ರದೇಶವೂ ಆಗಿದೆ.

೨೦೧೯ರಲ್ಲಿ ಈ ಕ್ಷೇತ್ರಕ್ಕೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (ಯುಡಿಎಫ್)ನ ಕೊಡಿಕುನ್ನಿಲ್ ಸುರೇಶ್ ರಿಗೆ – ೪,೪೦,೪೧೫ ಮತಗಳು ಎಡರಂಗ (ಸಿಪಿಐ)ಯ  ಚಿಟ್ಟಯಂ ಗೋಪಕುಮಾರ್ ರಿಗೆ ೩,೭೯,೨೭೭ ಮತ್ತು ಎನ್‌ಡಿಎ (ಬಿಡಿಜೆಎಸ್)ಯ ತಳವ ಸಹದೇವನ್‌ರಿಗೆ ೧,೩೩,೫೪೬ ಮತಗಳು ಲಭಿಸಿದ್ದು, ಅದರಲ್ಲಿ ಕಾಂಗ್ರೆಸ್‌ನ ಕೊಡಿಕುನ್ನಿಲ್ ಸುರೇಶ್ ಗೆದ್ದಿದ್ದರು. ಇನ್ನು ೨೦೦೯, ೨೦೧೪ರಲ್ಲಿ ನಡೆದ ಚುನಾವಣೆಯಲ್ಲೂ ಕೊಡಿಕುನ್ನಿಲ್ ಸುರೇಶ್ ಗೆದ್ದಿದ್ದರು.

೨೦೦೪ರಲ್ಲಿ ಸಿಪಿಎಂನ ಸಿ.ಎನ್. ಸುಜಾತ, ೧೯೯೯ರಲ್ಲಿ ಕಾಂಗ್ರೆಸ್‌ನ ರಮೇಶ್‌ಚೆನ್ನಿತ್ತಲ, ೧೯೯೮, ೧೯೯೬, ೧೯೯೧, ೧೯೮೯ರಲ್ಲಿ ಕಾಂಗ್ರೆಸ್‌ನ ಟಿ.ಜೆ.. ಕುರ‍್ಯನ್ ಈ ಕ್ಷೇತ್ರದಲ್ಲಿ ಸತತ ಗೆಲುವು ಸಾಧಿಸಿದ್ದರು. ೧೯೮೪ರಲ್ಲಿ ಜನತಾ ಪಕ್ಷದ ಟಿ.ಎನ್. ಉಪೇಂದ್ರ ಕುರುಪ್ ಗೆದ್ದಿದ್ದರು.

೧೯೮೦ರಲ್ಲಿ ಕಾಂಗ್ರೆಸ್‌ನ ಪಿ.ಜೆ. ಕುರ‍್ಯನ್ ೧೯೭೭ರಲ್ಲಿ ಕಾಂಗ್ರೆಸ್‌ನ ಬಿ.ಕೆ. ನಾಯರ್, ೧೯೭೧ರಲ್ಲಿ ಕೇರಳ ಕಾಂಗ್ರೆಸ್‌ನ ಆರ್. ಬಾಲಕೃಷ್ಣನ್ ಪಿಳ್ಳೆ ಇಲ್ಲಿ ಗೆದ್ದಿದ್ದರು.

ಈ ಲೋಕಸಭಾ ಚುನಾವಣೆಯಲ್ಲಿ ಈಗಿನ ಹಾಲಿ ಸಂಸದ ಕೊಡಿಕುನ್ನಿಲ್ ಸುರೇಶ್‌ರನ್ನೇ ಮತ್ತೆ ಕಣಕ್ಕಿಳಿಸಿದೆ. ಎಡರಂಗ ಉಮೇದ್ವಾರನಾಗಿ ಸಿ.ಎ. ಅರುಣ್ ಕುಮಾರ್ ಮತ್ತು ಎನ್‌ಡಿಎ ಉಮೇದ್ವಾರನಾಗಿ ಬೈಜು ಕಲಾಶಾಲಾ (ಬಿಡಿಜೆಎಸ್) ಸ್ಪರ್ಧಿಸುತ್ತಿದ್ದಾರೆ.

ಈ ಮೂರು ಉಮೇದ್ವಾರರೂ ಗೆಲುವಿನ ಸಮಾನ ನಿರೀಕ್ಷೆ ವ್ಯಕ್ತಪಡಿಸಿ ದ್ದಾರೆ. ವಿಶೇಷವೇನೆಂದರೆ ೨೦೧೯ರ ಲೋಕಸಭಾ ಕ್ಷೇತ್ರದ ಬಳಿಕ ೨೦೨೧ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವ ಣೆಯಲ್ಲಿ ಮಾವೇಲಿಕ್ಕರ ಲೋಕಸಭಾ ಕ್ಷೇತ್ರಗಳ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಯುಡಿಎಫ್‌ನ ಒಟ್ಟು ಮತಗಳು ೨೦೧೯ರಲ್ಲಿದ್ದ ೪,೪೦,೪೧೫ರಿಂದ ೩,೬೫,೦೮೨ ಕ್ಕಿಳಿದಿದೆ. ಎಡರಂಗದ ಮತಗಳಿಗೆ ೩,೭೯,೨೭೭ರಿಂದ ೪,೬೧,೬೨೬ಕ್ಕೇರಿದೆ. ಅದೇ ರೀತಿ ಎನ್‌ಡಿಎ ಮತಗಳಿಕೆಯೂ ೧,೩೩,೫೪೬ರಿಂದ ೧,೫೦,೪೮೦ಕ್ಕೇರಿದೆ. ಇದರಿಂದಾಗಿ  ಈ ಚುನಾವಣೆಯಲ್ಲಿ ನಮ್ಮ ಗೆಲುವು ಸುನಿಶ್ಚಿತವೆಂದು ಎಡರಂ ಗದ ನೇತಾರರು ಹೇಳುತ್ತಿದ್ದಾರೆ. ಆದರೆ ಆ ಕಾಲ ನಮ್ಮ ಗೆಲುವು ಸುನಿಶ್ಚಿತ ಎಂದೂ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

ದೇಶದಲ್ಲಿ ಇಂದು ಬಿಜೆಪಿ ಪರ ಅಲೆ ಇದೆ. ಇದು ಈ ಕ್ಷೇತ್ರದಲ್ಲಿ ನಮ್ಮ ಗೆಲುವಿಗೆ ಅನುಕೂಲಕರವಾ ಗಲಿದೆ ಎಂದು ಎಸ್‌ಡಿಎ ನೇತಾರರ ಇನ್ನೊಂದೆಡೆ ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page