ಲೋಕಸಭಾ ಚುನಾವಣೆ: ಸಿಪಿಎಂ ಉಮೇದ್ವಾರರ ಯಾದಿ ಅಂತಿಮ ಹಂತದಲ್ಲಿ ಕಾಸರಗೋಡಿನಲ್ಲಿ  ಎಂ.ವಿ. ಬಾಲಕೃಷ್ಣನ್, ?ಟಿ.ವಿ. ರಾಜೇಶ್ ಪರಿಗಣನೆಯಲ್ಲಿ

ಕಾಸರಗೋಡು:   ಲೋಕಸಭಾ ಚುನಾವಣೆ ಎಪ್ರಿಲ್ ತಿಂಗಳಲ್ಲಿ ಆರಂಭಗೊಳ್ಳಲಿರುವಂ ತೆಯೇ ಅದರಲ್ಲಿ ಸ್ಪರ್ಧಿಸುವ ಸಿಪಿಎಂ ಉಮೇದ್ವಾರರ ಯಾದಿ ಈಗ ಅಂತಿಮ ಹಂತದಲ್ಲಿದೆ.

ಇದರಂತೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್ ಮಾಸ್ತರ್ ಮತ್ತು  ಶಾಸಕ ಟಿ.ವಿ. ರಾಜೇಶ್ ಅವರ ಹೆಸರು ಪರಿಗಣನೆಯಲ್ಲಿದೆ. ಉಳಿದಂತೆ  ವಡಗರೆಯಲ್ಲಿ  ಮಾಜಿ ಸಚಿವೆ ಕೆ.ಕೆ. ಶೈಲಜಾ ಅವರನ್ನು ಕಣಕ್ಕಿಳಿಸುವುದು  ಬಹುತೇಕ ಈಗಾಗಲೇ ಖಚಿತಗೊಂಡಂತಾಗಿದೆ.  ಕೇರಳದ  ಒಟ್ಟು ೨೦ ಲೋಕಸಭಾ ಕ್ಷೇತ್ರಗಳ ಪೈಕಿ ೧೫ರಲ್ಲಿ ಸಿಪಿಎಂ ಸ್ಪರ್ಧಿಸಲಿದೆ. ಉಳಿದ ಸ್ಥಾನಗಳನ್ನು ಎಡರಂಗದ ಘಟಕ ಪಕ್ಷಗಳಿಗೆ  ಬಿಟ್ಟುಕೊಡಲಾಗಿದೆ.

ಉಮೇದ್ವಾರರ ಯಾದಿಯಲ್ಲಿ ಮಾಜಿ ಸಚಿವ ಡಾ. ಥೋಮಸ್ ಐಸಾಕ್, ಸಚಿವ ಎ.ಕೆ. ಬಾಲನ್ ಮತ್ತು ಎ. ಪ್ರದೀಪ್ ಕುಮಾರ್  ಅವರ ಹೆಸರೂ ಪರಿಗಣನೆಯಲ್ಲಿದೆ.  ವಡಗರ ಲೋಕಸಭಾ ಕ್ಷೇತ್ರ ಈ ಹಿಂದೆ ಸಿಪಿಎಂನ ಭದ್ರಕೋಟೆಗಳಲ್ಲೊಂದಾಗಿತ್ತು. ೨೦೦೯ರಿಂದ ಅದು ಕಾಂಗ್ರೆಸ್‌ನ ಪಾಲಾಗಿತ್ತು. ಅದನ್ನು ಮತ್ತೆ ತನ್ನ ಹಿಡಿತಕ್ಕೆ ಸೆಳೆಯುವ ಒಂದು ತಂತ್ರವಾಗಿ ಆ ಕ್ಷೇತ್ರದಲ್ಲಿ ಮಾಜಿ ಸಚಿವೆ ಕೆ.ಕೆ. ಶೈಲಜಾರನ್ನು ಆ  ಸ್ಪರ್ಧಾಕಣಕ್ಕಿಳಿಸಲು ಸಿಪಿಎಂ ಬಹುತೇಕ ಈಗಲೇ ತೀರ್ಮಾನಿಸಿದೆ. ಯಾಕೆಂದರೆ ಕೆ.ಕೆ. ಶೈಜಾ ಕೇರಳದಾದ್ಯಂತ ಎಲ್ಲರಿಗೂ ಅತ್ಯಂತ ಪ್ರೀತಿಪಾತ್ರರಾದ  ರಾಜಕೀಯ ನೇತಾರೆಯಾಗಿದ್ದಾರೆ.  ಇನ್ನು ಮಲಪ್ಪುರದಲ್ಲಿ  ಮುಸ್ಲಿಂ ಲೀಗ್ ಕೋಟೆಯನ್ನು ಹಿಡಿದೆಳೆಯಲು  ಸೂಕ್ತ ಅಭ್ಯರ್ಥಿಯೋರ್ವರ ಹುಡುಕಾಟ ದಲ್ಲೂ ಸಿಪಿಎಂ ತೊಡಗಿದೆ.  ಬಿಜೆಪಿಯ ಶಕ್ತಿ ಕೇಂದ್ರವಾಗಿ ಇತ್ತೀಚೆಗೆ  ಹೊರಹೊಮ್ಮತೊಡಗಿದ ಪಾಲ್ಘಾಟ್‌ನಲ್ಲಿ  ಆ ಪಕ್ಷದ ಪ್ರಭಾವವನ್ನು ತಗ್ಗಿಸಲು ಎಂ. ಸ್ವರಾಜ್‌ರನ್ನು ಕಣಕ್ಕಿಳಿಸುವ ಬಗ್ಗೆಯೂ ಸಿಪಿಎಂ ಆಲೋಚಿಸುತ್ತಿದೆ.  ಕೇರಳದ ಒಟ್ಟು ೨೦ ಲೋಕಸಭಾ ಕ್ಷೇತ್ರಗಳಲ್ಲಿ ಸಿಪಿಎಂ ೧೫, ಸಿಪಿಐ ೪ ಮತ್ತು ಒಂದರಲ್ಲಿ ಕೇರಳ ಕಾಂಗ್ರೆಸ್ ಎಂ ಸ್ಪರ್ಧಿಸಲಿದೆ.  ಚುನಾವಣೆಗಾಗಿರುವ ಅಗತ್ಯದ ಪೂರ್ವಭಾವಿ ಸಿದ್ಧತೆಗಳಲ್ಲಿ ಎಡರಂಗ ಈಗಾಗಲೇ ತೊಡಗಿದೆ.

Leave a Reply

Your email address will not be published. Required fields are marked *

You cannot copy content of this page