ವಯನಾಡು ಪುನರ್ವಸತಿ ಯೋಜನೆಗೆ ಕೆವಿವಿಇಎಸ್ ಜಿಲ್ಲಾ ಸಮಿತಿಯಿಂದ ಸಹಾಯ ಘೋಷಣೆ
ಕಾಸರಗೋಡು: ಕೇರಳ ಇದುವರೆಗೆ ಎದುರಿಸದ ಅತ್ಯಂತ ದೊಡ್ಡ ಪ್ರಕೃತಿ ವಿಕೋಪಕ್ಕೆ ವಯನಾಡು ಸಾಕ್ಷಿಯಾಗಿದ್ದು, ಇದರಲ್ಲಿ ಮಡಿದವರ ಕುಟುಂಬಕ್ಕೆ ಸಹಾಯ ಮಾಡಲು ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕೆಂದು, ಉದ್ಯೋಗ ಆದಾಯ ನಷ್ಟಗೊಂಡವರ ಸಾಲ ಮನ್ನಾ ಮಾಡಬೇಕು, ಶಿಬಿರಗಳಲ್ಲಿ, ಸಂಬಂಧಿಕರ ಮನೆಗಳಲ್ಲಿ ಇರುವವರಿಗೆ ತುರ್ತು ಧನಸಹಾಯ ನೀಡಬೇಕೆಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಸೆಕ್ರೆಟರಿಯೇಟ್ ಸಭೆ ಸರಕಾರಕ್ಕೆ ಆಗ್ರಹಿಸಿದೆ. ವ್ಯಾಪಾರ ಸಂಸ್ಥೆ, ಮನೆ ನಿರ್ಮಿಸುವುದಕ್ಕೆ, ಸಂಸ್ಥೆ, ಉದ್ಯೋಗ ಕಳೆದುಕೊಂಡ ವ್ಯಾಪಾರಿಗಳಿಗೆ ಪುನರ್ವಸತಿ ಕೈಗೊಳ್ಳುವುದಕ್ಕೆ ಸಾಧ್ಯವಾದಷ್ಟು ಸಹಾಯವನ್ನು ನೀಡುವುದಾಗಿ ಜಿಲ್ಲಾ ಸಮಿತಿ ಘೋಷಿಸಿದೆ. ರಾಜ್ಯ ಸಮಿತಿ ೩ ಎಕ್ರೆ ಸ್ಥಳ ಹಾಗೂ ೧೦ ಕೋಟಿ ರೂ.ವನ್ನು ಪುನರ್ವಸತಿ ಯೋಜನೆಗೆ ನೀಡುವುದರಲ್ಲೂ ಜಿಲ್ಲೆಯ ವ್ಯಾಪಾರಿ ಸಂಘಟನೆಯ ವ್ಯಾಪಾರಿಗಳ ಸಹಾಯವಿರುತ್ತದೆ ಎಂದು ಸಭೆ ತಿಳಿಸಿದೆ. ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಸಜಿ, ಜಿಲ್ಲಾ ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ, ಪದಾಧಿಕಾರಿಗಳಾದ ಪಿ.ಪಿ. ಮುಸ್ತಫ, ಎ.ಎ. ಅಸೀಸ್, ಹಂಸ ಪಾಲಕಿ, ಎ.ವಿ. ಹರಿಹರಸುತನ್, ಥೋಮಸ್ ಕಾನಾಟ್, ಬಶೀರ್ ಕನಿಲ, ಸಿ.ಎಚ್. ಅಬ್ದುಲ್ ಖರೀಂ, ಅನ್ವರ್ ಸಾದಾತ್ ಟಿ.ಎ, ಅಬ್ದುಲ್ ಸಲೀಂ ಯು.ಎ, ಆಸಿಫ್ ಸಿ.ಕೆ, ಕೆ.ವಿ. ದಾಮೋದರನ್, ಮುಹಮ್ಮದ್ ಕುಂಞಿ ಕುಂಜಾರ್, ಕೆ.ವಿ. ಬಾಲಕೃಷ್ಣನ್ ಮಾತನಾಡಿದರು.