ವಯನಾಡ್‌ಗೆ ಮುಹಿಮ್ಮಾತ್ ಶಾಲೆಯಿಂದ ಸಹಾಯ ಹಸ್ತಾಂತರ
ಪುತ್ತಿಗೆ: ವಯನಾಡು ದುರಂತ ಸ್ಥಳಕ್ಕೆ ಮೊದಲ ಹಂತದ ಸಹಾಯವನ್ನು ಮುಹಿಮ್ಮಾತ್ ಹೈಯರ್ ಸೆಕೆಂಡರಿ ಶಾಲೆ ವತಿಯಿಂದ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ. ಅಕ್ಕಿ, ಧವಸಧಾನ್ಯಗಳು, ಕುಡಿಯುವ ನೀರು ಮೊದಲಾದ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಗಿದ್ದು, ಈ ಕಾರ್ಯಕ್ಕೆ ಮುಹಿಮ್ಮಾತ್ ಸ್ಟಾಫ್ ಕಾರ್ಯದರ್ಶಿ ರೇಶ್ಮ ನೇತೃತ್ವ ನೀಡಿದರು. ಪ್ರಾಂಶುಪಾಲ ರೂಪೇಶ್ ಎ.ಟಿ, ಮುಖ್ಯೋಪಾಧ್ಯಾಯ ಅಬ್ದುಲ್ ಖಾದರ್, ಅಹಮ್ಮದ್ ಸಾದಿಕ್, ಆಸಿಫ್ ಮೊದಲಾದವರು ಅಧಿಕಾರಿ ಎಂ.ವಿ.ರಾಜೇಶ್‌ರಿಗೆ ಹಸ್ತಾಂತರಿಸಿದರು.