ವರದಕ್ಷಿಣೆಗಾಗಿ ಒತ್ತಾಯಿಸಿ ಯುವತಿಗೆ ಕಿರುಕುಳ : ಪತಿ ಸಹಿತ ಮೂರು ಮಂದಿ ವಿರುದ್ಧ ಕೇಸು
ಕುಂಬಳೆ: ವರದಕ್ಷಿಣೆಗೆ ಒತ್ತಾಯಿಸಿ ಯುವತಿಗೆ ಮಾನಸಿಕ, ಶಾರೀರಿಕ ಕಿರುಕುಳ ನೀಡಿದ ಆರೋಪದಂತೆ ಆಕೆಯ ಪತಿ ಸಹಿತ ಮೂರು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ.
ಮಂಡೆಕಾಪು ಕುಡಾಲ್‌ಮೇರ್ಕ ಳದ ಅಬ್ದುಲ್ ನಿರ್ಶಾದ್, ಈತನ ತಾಯಿ ಸೈನಬ, ಸಹೋದರಿ ರಾಶಿದ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ೨೦೨೦ ಅಕ್ಟೋಬರ್ ೩೦ರಂದು ಅಬ್ದುಲ್ ನಿರ್ಶಾದ್ ವಿವಾಹ ಉನೈರ ಎಂಬಾಕೆಯೊಂದಿಗೆ ನಡೆದಿತ್ತು. ಈ ವೇಳೆ ೨೦ ಪವನ್ ಚಿನ್ನಾಭರಣ ವರದಕ್ಷಿಣೆಯಾಗಿ ನೀಡಲಾಗಿತ್ತು. ಅನಂತರ ಗಲ್ಫ್‌ಗೆ ತೆರಳಿ ಕೆಲವು ತಿಂಗಳ ಬಳಿಕ ಮರಳಿದ ಅಬ್ದುಲ್ ನಿರ್ಶಾದ್ ಹೆಚ್ಚುವರಿ ವರದಕ್ಷಿಣೆಗಾಗಿ ಒತ್ತಾಯಿಸಿ ಕಿರುಕುಳ ನೀಡಿದ್ದಾನೆನ್ನಲಾಗಿದೆ. ಅಲ್ಲದೆ ಈತನ ತಾಯಿ ಹಾಗೂ ಸಹೋದರಿಯೂ ಉನೈರಳಿಗೆ ಮಾನಸಿಕ, ಶಾರೀರಿಕ ಕಿರುಕುಳ ನೀಡದ್ದಾರೆನ್ನಲಾಗಿದೆ. ವರದಕ್ಷಿಣೆ ನೀಡದ ಹಿನ್ನೆಲೆಯಲ್ಲಿ ಅಬ್ದುಲ್ ನಿರ್ಶಾದ್ ಉನೈರಳನ್ನು ಮನೆಯಿಂದ ಹೊರಹಾಕಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಕಿರುಕುಳದ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ.