ವರ್ಕಾಡಿಯಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್ ವತಿಯಿಂದ ರಕ್ತದಾನ ಶಿಬಿರ
ಮಂಜೇಶ್ವರ : ಇಂಡಿಯನ್ ಯೂತ್ ಕಾಂಗ್ರೆಸ್ ವರ್ಕಾಡಿ ಮಂ ಡಲ ಸಮಿತಿಯ ನೇತೃತ್ವದಲ್ಲಿ ವರ್ಕಾಡಿ ಮಜೀರ್ ಪಳ್ಳದಲ್ಲಿ ರಕ್ತದಾನ ಶಿಬಿರ ಜರಗಿತು. ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಯೇನಪೋಯ ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಕೆ. ಉದ್ಘಾಟಿಸಿದರು. ಯೂತ್ ಕಾಂಗ್ರೆಸ್ ವರ್ಕಾಡಿ ಮಂಡಲ ಸಮಿತಿ ಅಧ್ಯಕ್ಷೆ ಶರ್ಮಿಳಾ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ, ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಅರಿಬೈಲು, ನವಾಜ್ ನರಿಂಗಾನ, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹನೀಫ್ ಎಚ್. ಎ., ವರ್ಕಾಡಿ ಯುಡಿಎಫ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಮಜಾಲ್, ಹಿರಿಯ ಕಾಂಗ್ರೆಸ್ ಮುಖಂಡ ಎಸ್. ಅಬ್ದುಲ್ ಖಾದರ್ ಹಾಜಿ, ಬಿ.ಕೆ. ಮೊಹಮ್ಮದ್, ವಿಕ್ಟರ್ ವೇಗಸ್,ಫ್ರಾನ್ಸಿಸ್ ಡಿ.ಸೋಜ, ರಝಾಕ್ ಕೆದಕ್ಕಾರ್, ಅಬೂಬಕ್ಕರ್ ಧರ್ಮನಗರ, ಕೆ.ಎಚ್ ಅಬೂಬಕ್ಕರ್, ಅಶ್ರಫ್ ಆನೆಕಲ್ಲು ಅತಿಥಿಗಳಾಗಿದ್ದರು. ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಮೀದ್ ಬೋರ್ಕಳ ನಿರೂಪಿಸಿ ದರು. ಸಿದ್ದೀಕ್ ಮಂಜೇಶ್ವರ, ಅಝೀಝ್ ಕಲ್ಲೂರು, ಅಬೂಸಾಲಿ ಗಾಂಧಿನಗರ, ಕಾಂಗ್ರೆಸ್ ಮುಖಂಡರಾದ ವಿನೋದ್ ಕುಮಾರ್ ಪಾವೂರು, ಸದಾಶಿವ ಕೆ, ಅಲಿ ಧರ್ಮನಗರ, ಇಮ್ತಿಯಾಝ್ ಅಹ್ಮದ್, ವಸಂತರಾಜ ಶೆಟ್ಟಿ, ಎ. ಎಂ. ಉಮರ್ ಕುಂಞ, ಹಮೀದ್ ಕಣಿಯೂರು, ರಾಬಿಯಾ, ವೇದಾ ಧರ್ಮ ನಗರ ಉಪಸ್ಥಿತರಿದ್ದರು.