ವರ್ಕಾಡಿ: ಗುಡ್ಡೆ ಕುಸಿದ ಪ್ರದೇಶಗಳಿಗೆ ಶಾಸಕ ಎಕೆಎಂ ಅಶ್ರಫ್ ಭೇಟಿ
ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತ್ನ ವಿವಿಧ ಕಡೆಗಳಲ್ಲಿ ಗುಡ್ಡೆ ಕುಸಿದ ಸ್ಥಳಗಳಿಗೆ ಶಾಸಕ ಎಕೆಎಂ ಅಶ್ರಫ್ ಭೇಟಿ ನೀಡಿದರು. ದೈಗೋಳಿ- ನಂದರಪದವು ರಸ್ತೆಯ ಪೊಯ್ಯತ್ತಬೈಲುನಲ್ಲಿ ಗುಡ್ಡೆ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಜಿಲ್ಲಾಧಿಕಾರಿ, ಪಿಎಂಜಿಎಸ್ವೈ ಚೀಫ್ ಇಂಜಿನಿಯರ್ ಹಾಗೂ ರಸ್ತೆಯ ಗುತ್ತಿಗೆದಾರರಿಗೆ ಫೋನ್ ಸಂದೇಶದ ಮೂಲಕ ತಡೆಗೋಡೆಯ ಬಗ್ಗೆ ವಿವರ ನೀಡಿದರು. ಸಂಬಂಧಪಟ್ಟವರನ್ನು ಸೇರಿಸಿ ಸಭೆ ನಡೆಸುವಂತೆಯೂ ಜಿಲ್ಲಾಧಿಕಾರಿಗೆ ಸೂಚಿಸಿದರು.
ಕತ್ತರಿಕೋಡಿಯಲ್ಲಿ ಗುಡ್ಡೆಕುಸಿತ ಉಂಟಾದ ಪ್ರದೇಶಗಳಿಗೆ ಸಂದರ್ಶಿಸಿ, ಅಲ್ಲಿ ಅಪಾಯ ಭೀತಿಯಲ್ಲಿರುವ ಮನೆಗಳನ್ನು ವೀಕ್ಷಿಸಿದರು. ಇದರ ವಿವರಗಳನ್ನು ಕೂಡಲೇ ಸರಕಾರಕ್ಕೆ ಸಮರ್ಪಿಸುವುದಾಗಿ ತಿಳಿಸಿದರು. ರಸ್ತೆ ಅಪಘಾತಕ್ಕೊಳಗಾಗಿ ಕಾಲು ಕಳೆದುಕೊಂಡ ಬಾಕ್ರಬೈಲು ಸಮೀಪದ ಮೂಡಾಯಿ ಬೆಟ್ಟುವಿನ ಗೌತಂರ ಮನೆಗೆ ಭೇಟಿ ನೀಡಿ ಅವರನ್ನು ಸಂತೈಸಿ ದರು. ಈ ವೇಳೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬ್ದುಲ್ ಮಜೀದ್ ಬಿ.ಎ, ಉಮ್ಮರ್ ಬೋರ್ಕಳ, ಪದ್ಮಾವತಿ, ಇಬ್ರಾಹಿಂ ಧರ್ಮನಗರ, ವಿವಿಧ ಪಕ್ಷದ ನೇತಾರರಾದ ಸಿದ್ದೀಕ್ ಬದ್ಯಾರ್, ಶಾಹುಲ್ ಹಮೀದ್ ಕಿನ್ಯಜೆ, ರಝಾಕ್ ಆರ್.ಕೆ, ಸದಾಶಿವ ಸಪಲ್ಯ, ಮುಸ್ತಫ ಕಡಂಬಾರ್, ಅಝೀಝ್ ಅಸನಬೈಲ್, ಟಿ. ದೂಮಪ್ಪ ಶೆಟ್ಟಿ, ಪ್ರಕಾಶ್ ಪೊಯ್ಯತ್ತಬೈಲ್, ಮೊಯ್ದೀನ್ ಹಾಜಿ ಬಳಪು, ಡಿಬಿಎ ಖಾದರ್ ಬಾಕ್ರಬೈಲ್, ನಾರಾಯಣ ಶೆಟ್ಟಿ, ನೌಶಾದ್ ಕೆದಕ್ಕಾರ್, ಮನ್ಸಾದ್ ಬದ್ಯಾರ್ ಮೊದಲಾದವರು ಶಾಸಕರ ಜೊತೆಗಿದ್ದರು.