ವರ್ಕಾಡಿ ಚರ್ಚ್‌ನಲ್ಲಿ ವೇಲಂಕಣಿ ಮಾತೆಯ ವಾರ್ಷಿಕ ಮಹೋತ್ಸವ: ಹೊರೆಕಾಣಿಕೆ ಮೆರವಣಿಗೆ ನಾಳೆ
ವರ್ಕಾಡಿ: ಇಲ್ಲಿನ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್‌ನ ವೇಲಂಕಣಿ ಮಾತೆಯ ವಾರ್ಷಿಕ ಮಹೋತ್ಸವ ಮಾರ್ಚ್ 2ರಂದು ನಡೆಯಲಿದೆ. ಇದರ ಪೂರ್ವಭಾವಿಯಾಗಿ ನಾಳೆ ಸಂಜೆ 5 ಗಂಟೆಗೆ ವರ್ಕಾಡಿ ಬೇಕರಿ ಜಂಕ್ಷನ್‌ನಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮಾರ್ಚ್ 1ರಂದು ಸಂಜೆ 4ಕ್ಕೆ ನೊವೇನಾ ಪಾರ್ಥನೆ ಜರಗಲಿದೆ. 2ರಂದು ಮೊಂಬತ್ತಿ ವಿತರಣೆ, ದಿವ್ಯ ಬಲಿಪೂಜೆ ಜರಗಲಿದ್ದು, ಅತಿವಂದನೀಯ ಅಲೋಶಿ ಯಸ್ ಪಾವ್ಲ್ ಡಿಸೋಜ ನೆರವೇರಿಸುವರು. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ ಜರಗಲಿದೆ ಎಂದು ಧರ್ಮಗುರು ಫಾ| ಬಾಸಿಲ್‌ವಾಸ್ ತಿಳಿಸಿದ್ದಾರೆ.