ವರ್ಕಾಡಿ ಪಂಚಾಯತ್ ಮುಸ್ಲಿಂ ಲೀಗ್ ವಾರ್ಡ್ ಸಭೆ ನಾಳೆಯಿಂದ
ವರ್ಕಾಡಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲೆಯ ಪ್ರತೀ ಪಂಚಾಯತ್ ವಾರ್ಡ್‌ಗಳಲ್ಲಿ ನಡೆಸುವ ಸಭೆ ನಾಳಯಿಂದ ವರ್ಕಾಡಿಯಲ್ಲಿ ನಡೆಯಲಿದೆ. ನಾಳೆ ಪಾವೂರು ಒಂದ ನೇ ವಾರ್ಡ್‌ನಲ್ಲಿ ಸಭೆ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಪ್ರತೀ ವಾರ್ಡ್‌ಗಳಲ್ಲೂ ವಾರ್ಡ್ ಸಭೆ ನಡೆಯಲಿದೆ. ಈ ಕುರಿತು ನಡೆದ ಪಂಚಾಯತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎ. ಮುಹಮ್ಮದ್ ಅಧ್ಯಕ್ಷತೆ ವಹಿಸಿದರು. ಮೂಸಕುಂಞಿ ಹಾಜಿ ತೋಕೆ ಉದ್ಘಾಟಿಸಿದರು. ಅಬ್ದುಲ್ ಮಜೀದ್ ಸ್ವಾಗತಿಸಿದರು. ಬಾವಹಾಜಿ ಸೂಫಿನಗರ್, ಸಿದ್ದಿಕ್ ಬದ್ಯಾರ್, ಅಹಮ್ಮದ್ ಕುಂಞಿ ಕಜೆ, ಇಬ್ರಾಹಿಂ ಕಜೆ, ಕಲೀಲ್ ಸಿ.ಎಂ.ನಗರ್, ಹನೀಫಾ ಕಾನಂಗೋಡಿ, ಬದ್ರುದ್ದೀನ್ ಪಾವೂರು, ಮುತ್ತಲಿಬ್ ಕೆದುಂಬಾಡಿ, ಅಬು ಬಟ್ಯಡ್ಕ, ಮೊಯ್ದೀನ್ ಕುಂಞಿ ಪಾತೂರು, ಕರೀಂ ಪಾತೂರು ಕೆ. ಹಸನ್ ಪಾತೂರು, ಉಮ್ಮರ್ ಬಾಕ್ರಬೈಲು, ಮುಹಮ್ಮದ್ ನಡಿಬೈಲು, ಅಶ್ರಫ್ ನಡಿಬೈಲು, ಮುಹಮ್ಮದ್ ಕಜೆ, ಲತೀಫ್ ಜೆ, ಅಹ್ಮದ್ ಕುಂಞಿ ಕಜೆ, ಕರೀಂ ಮಾಸ್ತರ್ ಕೊಡ್ಲಮೊಗರು, ಝುಬೈರ್ ಮಾಸ್ತರ್ ಕೊಣಿಬೈಲು, ಇಬ್ರಾಹಿಂ ಧರ್ಮನಗರ ಅಹಮ್ಮದ್ ಕುಂಞಿ ಓಡಂಗಳ, ಹಾರೂನ್ ರಶೀದ್, ಸಮೀರ್ ಸೂಫಿಗುರಿ, ರಜಾಕ್ ಸೂಫಿಗುರಿ ಚರ್ಚೆಯಲ್ಲಿ ಭಾಗವಹಿಸಿದರು. ವಿ.ಎಸ್. ಮೊಹಮ್ಮದ್ ವಂದಿಸಿದರು.