ವರ್ಕಾಡಿ: ಬೀದಿ ದೀಪ ದುರಸ್ತಿಗೊಳಿಸಬೇಕು, ಕೃಷಿಕರಿಗೆ ಸೌಲತು ವಿತರಿಸಲು ಪಂ.ಆಡಳಿತ ಶೀಘ್ರ ಕ್ರಮ ಕೈಗೊಳ್ಳಬೇಕು- ಮುಸ್ಲಿಂ ಲೀಗ್
ವರ್ಕಾಡಿ: ವರ್ಕಾಡಿ ಪಂಚಾಯತ್‌ನ ವಿವಿಧ ವಾರ್ಡ್‌ಗಳಲ್ಲಿ ಸ್ಥಾಪಿಸಿದ ಹೈಮಾಸ್ಟ್, ಲೋಮಾಸ್ಟ್ ಬೀದಿ ದೀಪಗಳು ಕೆಟ್ಟು ಹೋಗಿ ಹಲವು ತಿಂಗಳುಗಳೇ ಕಳೆಯಿತು. ರಾತ್ರಿ ವೇಳೆ ಈ ಪ್ರದೇಶದಲ್ಲಿ ಕತ್ತಲು ಆವರಿಸಿಕೊಳ್ಳುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಯಾಗುತ್ತಿದೆ. ಈ ಬಗ್ಗೆ ಪಂಚಾಯತ್ ಆಡಳಿತ ಸಮಿತಿಗೆ ತಿಳಿಸಿದರೂ ಬೀದಿ ದೀಪಗಳ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಐಯುಎಂಎಲ್ ವರ್ಕಾಡಿ ಪಂಚಾಯತ್ ಸಮಿತಿ ಆರೋಪಿಸಿದೆ.ತೆಂಗು, ಕಂಗು, ಭತ್ತ ಕೃಷಿಕರಿಗೆ ನೀಡಬೇಕಾಗಿದ್ದ ಸವಲತ್ತುಗಳು ಸಕಾಲದಲ್ಲಿ ಲಭಿಸದಿರುವುದರಿಂದ ಕೃಷಿಕರು ತೊಂದರೆಗೀಡಾಗಿದ್ದಾರೆ. ಎಡರಂಗ ವರ್ಕಾಡಿ ಪಂಚಾಯತ್ ಆಡಳಿತ ಸಮಿತಿ ಕೃಷಿಕರನ್ನು ಸತಾಯಿಸುವ ಕ್ರಮವನ್ನು ಅನುಸರಿಸುತ್ತಿದೆ. ಸವಲತ್ತುಗಳಿಗಾಗಿ ಕೃಷಿಭವನವನ್ನು ಸಂಪರ್ಕಿಸಿದಾಗ ಪಂಚಾಯತ್ ಅಂಗೀಕರಿಸಿದ ಪಟ್ಟಿ ಸಿಗಲಿಲ್ಲ ಎಂಬ ಪ್ರತಿಕ್ರಿಯೆ ಲಭಿಸುತ್ತಿದೆ. ಇದರಿಂದ ಕೃಷಿಕರು ತೀವ್ರ ಸಮಸ್ಯೆ ಎದುರಿಸಬೇಕಾಗಿ ಬಂದಿದೆ ಎಂದು ಐಯುಎಂಎಲ್ ಆರೋಪಿಸಿದೆ. ಕೆಟ್ಟು ಹೋಗಿರುವ ಬೀದಿ ದೀಪಗಳನ್ನು ಶೀಘ್ರ ದುರಸ್ತಿಗೊಳಿಸಬೇಕು, ಕೃಷಿಕರಿಗೆ ವಿತರಿಸಬೇಕಾದ ಸೌಲಭ್ಯಗಳನ್ನು ಕೂಡಲೇ ದೊರಕಿಸಲು ಪಂಚಾಯತ್ ಕ್ರಮ ಕೈಗೊಳ್ಳಬೇಕೆಂದು ಐಯುಎಂಎಲ್ ಪಂಚಾಯತ್ ಪದಾಧಿಕಾರಿಗಳ ಸಭೆ ಒತ್ತಾಯಿಸಿದೆ. ಕೆ. ಮುಹಮ್ಮದ್ ಪಾವೂರು ಅಧ್ಯಕ್ಷತೆ ವಹಿಸಿದರು. ಅಬ್ದುಲ್ ಮಜೀದ್ ಬಿ.ಎ, ಪಿ.ಬಿ. ಅಬೂಬಕ್ಕರ್ ಪಾತೂರು, ಪಿ.ಎಂ. ಮೂಸ ಕುಂಞಿ ಹಾಜಿ ತೋಕೆ, ವಿ.ಎಸ್. ಮುಹಮ್ಮದ್ ಧರ್ಮನಗರ, ಉಮರಬ್ಬ ಆನೆಕಲ್ಲು, ಬಾವ ಹಾಜಿ ಸೂಪಿನಗರ, ಮೂಸ ಕೆದುಂಬಾಡಿ, ಅಹಮ್ಮದ್ ಕುಂಞಿ ಕುಣಿಬೈಲು, ಇಬ್ರಾಹಿಂ ಕಜೆ, ಸಿದ್ದಿಕ್ ಧರ್ಮನಗರ, ಇಬ್ರಾಹಿಂ ಧರ್ಮನಗರ, ಹಾರಿಸ್ ಪಾವೂರು, ಜುಬೈರ್ ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದರು