ವರ್ಕಾಡಿ ವಿದ್ಯುತ್ ಕಚೇರಿಗೆ ಲೀಗ್ ಮಾರ್ಚ್
ವರ್ಕಾಡಿ: ವಿದ್ಯುತ್ ದರ ಏರಿಕೆ ಹಿಂತೆಗೆಯಬೇಕೆಂದು ಆಗ್ರಹಿಸಿ ಮುಸ್ಲಿಂ ಲೀಗ್ ರಾಜ್ಯ ವ್ಯಾಪಕವಾಗಿ ನಡೆಸುವ ಪ್ರತಿಭಟನೆಯಂಗವಾಗಿ ವರ್ಕಾಡಿ ಕೆಎಸ್ಇಬಿ ಕಚೇರಿಗೆ ಲೀಗ್ ಮೀಂಜ ಹಾಗೂ ವರ್ಕಾಡಿ ಪಂಚಾಯತ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಮಾರ್ಚ್ ನಡೆಸಲಾಯಿತು. ಪಕ್ಷದ ಮಂಡಲ ಕಾರ್ಯದರ್ಶಿ ಎ.ಕೆ. ಆರೀಫ್ ಉದ್ಘಾಟಿಸಿದರು. ಕೆ. ಮೊಹಮ್ಮದ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಇರ್ಷಾದ್ ಮೊಗ್ರಾಲ್, ಅಬ್ದುಲ್ ಮಾದೇರಿ, ಅಂದುಂಞಿ ಹಾಜಿ, ಕೆ.ಕೆ. ಖಾಲಿದ್, ವಾಹಿದ್ ಕೂಡಲ್, ಎಂ.ಎಸ್.ಎ. ಸತ್ತಾರ್, ಎ.ಕೆ. ಮರಬ್ಬ, ಬಾವ ಜಿ., ಮೂಸಾ ಕೆದುಂಬಾಡಿ, ಮೊಹಮ್ಮದ್ ಕುಂಞಿ, ತಾಜುದ್ದೀನ್ ಕಡಂಬಾರ್, ಅಬ್ದುಲ್ ಮಜೀದ್ ಬಿ.ಎ. ಮಾತನಾಡಿದರು.