ವರ್ಕಾಡಿ ಶ್ರೀ ಕಾವೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶ ಸಂಪನ್ನ
ವರ್ಕಾಡಿ: ಕಾವೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಬ್ರಹ್ಮಕಲಶ ನಡೆಯಿತು. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಅಡಪ್ಪ ಅಧ್ಯಕ್ಷತೆ ವಹಿಸಿದರು. ವೇದಮೂರ್ತಿ ಗಣೇಶ್ ಭಟ್, ರಾಕೇಶ್ ಶೆಟ್ಟಿ, ಚಂದ್ರಹಾಸ ಕಣಂತೂರು, ಹರಿಕಿರಣ ಬಂಗೇರ, ದುರ್ಗಾದಾಸ್ ಭಂಡಾರಿ, ಜಯಪ್ರಕಾಶ್ ಶೆಟ್ಟಿ, ಪ್ರಶಾಂತ್ ಕಾಜವ, ಅಶ್ವಿನಿ ಎಂಎಲ್, ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಉಪಸ್ಥಿತರಿದ್ದರು. ಪ್ರಶಾಂತ್ ಭಂಡಾರಿ ಸ್ವಾಗತಿಸಿ, ಚಂದ್ರಕುಮಾರ್ ಬಲಿಪಗುಳಿ ವಂದಿಸಿದರು. ರವೀಂದ್ರ ಕುಲಾಲ್ ನಿರೂಪಿಸಿದರು.ಜಗದೀಶ್ ಆಚಾರ್ಯದಿಂದ ಸಂಗೀತಗಾನ ಸಂಭ್ರಮ, ರಸಮಂಜರಿ ಜರಗಿತು.