ವರ್ಕಾಡಿ: ಶ್ರೀ ಗಣೇಶೋತ್ಸವ ಸಭೆ
ವರ್ಕಾಡಿ:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಾವಲಿಗುಳಿ, ವರ್ಕಾಡಿ, ಮಂಜೇಶ್ವರ ಇದರ ಆಶ್ರಯದಲ್ಲಿ ಗಣೇಶೋತ್ಸವದ ದಶಮಾನೋತ್ಸವ ಪ್ರಯುಕ್ತ ಸಮಿತಿಯ ಮಹಾಸಭೆ ನಡೆಯಿತು. ಸಮಿತಿಯ ಗೌರಾವಾಧ್ಯಕ್ಷÀ ಲಕ್ಷ್ಮೀನಾರಾಯಣ ಹೊಳ್ಳ ಮರಿಕಾಪು ಅಧ್ಯಕ್ಷತೆ ವಹಿಸಿ ಮಾತನಾಡಿ ಈ ವರ್ಷದ ಗಣೇಶೋತ್ಸವ ಅದ್ದೂರಿಯಾಗಿ ನಾಡಿನ ಜನತೆಯ ಮನ ಗೆಲ್ಲಬೇಕು. ಸರ್ವೇ ಜನ ಸುಖಿನೋ ಭವಂತು ಎಂಬAತೆ ಎಲ್ಲಾ ಧರ್ಮ ದವರಿಗೂ ಸುಖ ಶಾಂತಿ ಸಿಗಬೇಕು. ಈ ನಿಟ್ಟಿನಲ್ಲಿ ಯುವಕರ ಶ್ರಮ ಅವಶ್ಯ ಕವೆಂದರು. ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಅಡ್ಕ, ಸಂತೋಷ ತಂತ್ರಿ ವರ್ಕಾಡಿ, ಸಮಿತಿಯ ಪ್ರಧಾನ ಸಂಚಾಲಕ ಹರೀಶ್ ಕನ್ನಿಗುಳಿ, ಗೌರವ ಸಲಹೆಗಾರ ಶಂಕರನಾರಾಯಣ ಹೊಳ್ಳ ಮರಿಕಾಪು, ಜಿತೇಶ್ ಪೂಂಜಾರಮನೆ, ಸುಧಾಕರ ಶೆಟ್ಟಿ ಭಂಡಾರ ಮನೆ, ಸತೀಶ್ ಮಳಿ, ಪವನ್ ಬೋಳದ ಪದವು, ಜಗದೀಶ್ ನೀರೋಳಿಕೆ, ಅಜಿತ್ ಬೋಳದ ಪದವು, ಯುವಕ ಮಂಡಲ ತೌಡುಗೋಳಿ, ಪ್ರಿಯದರ್ಶಿನಿ ಬೋಳದಪದವು, ಶಿವಾಜಿ ಬೋಳದಪದವು, ಬ್ರಹ್ಮ ಮುಗೇರ ಸೇವಾ ಸಮಿತಿ ಬೋಳದಪದವು ಇದರ ಸದಸ್ಯರು ಭಾಗವಹಿಸಿದ್ದರು.