‘ವಶಪಡಿಸಿದ್ದು 7 ಲಕ್ಷ ರೂ: ಎಫ್ಐಆರ್ನಲ್ಲಿ 4.68 ಲಕ್ಷ ರೂ’-ಪೊಲೀಸ್ ವಿರುದ್ಧ ಶಾಸಕ ಎನ್.ಎ. ನೆಲ್ಲಿಕುನ್ನು ಆರೋಪ
ಕಾಸರಗೋಡು: ಶಾಸಕ ಪಿ.ವಿ. ಅನ್ವರ್ರ ಬೆನ್ನಲ್ಲೇ ಪೊಲೀಸರ ವಿರುದ್ಧ ಗಂಭೀರ ಆರೋಪಗಳೊಂದಿಗೆ ಶಾಸಕ ಎನ್.ಎ. ನೆಲ್ಲಿಕುನ್ನು ಕೂಡಾ ರಂಗಕ್ಕಿಳಿ ದಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸರು ವಶಪಡಿಸಿದ ಹವಾಲ ಹಣವನ್ನು ಪೂರ್ಣವಾಗಿ ನ್ಯಾಯಾಲ ಯದಲ್ಲಿ ಹಾಜರುಪಡಿಸದೆ ಅಧಿಕಾರಿ ಗಳು ಲಪಟಾಯಿಸಿದರೆಂದು ಶಾಸಕ ಎನ್.ಎ. ನೆಲ್ಲಿಕುನ್ನು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಯೂತ್ ಲೀಗ್ ಜಿಲ್ಲಾ ಸಮಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿಗೆ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 2023 ಆಗಸ್ಟ್ 25ರಂದು ಹೊಸದುರ್ಗ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಅಣಂಗೂರು ಬದರಿಯ ಹೌಸ್ನ ಬಿ.ಎಂ. ಇಬ್ರಾಹಿಂರಿಂದ ಏಳು ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದರು. ಆದರೆ ಎಫ್ಐಆರ್ನಲ್ಲಿ 4,68,000 ರೂಪಾಯಿ ದಾಖಲೆ ಪತ್ರಗಳಿಲ್ಲದೆ ಅನಧಿಕೃತವಾಗಿ ಕೈವಶವಿರಿಸಲಾಗಿತ್ತು ಎಂದು ತಿಳಿಸಲಾಗಿದೆ. ಬಾಕಿ 2,32,000 ರೂಪಾಯಿ ಏನಾಯಿತೆಂದು ಶಾಸಕ ಪ್ರಶ್ನಿಸಿದ್ದಾರೆ. ಹಣ ಕೈವಶವಿ ರಿಸಿಕೊಂಡಿರುವುದು ಕಾನೂನು ವಿರುದ್ಧವಾಗಿರಲಿಲ್ಲ ಎಂದು ಪ್ರಕರಣದಲ್ಲಿ ಆರೋಪಿ ಯಾದ ಇಬ್ರಾಹಿಂ ತಿಳಿಸುತ್ತಿದ್ದಾರೆ. ಅದನ್ನು ಸಾಬೀತುಪಡಿಸಲಿರುವ ದಾಖಲೆ ಪತ್ರಗಳು ಕೈವಶವಿದೆಯೆಂದೂ ಅವರು ತಿಳಿಸುತ್ತಿದ್ದಾರೆ. ಘಟನೆ ಕುರಿತು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದೆ. ಹವಾಲ ಘಟನೆಯ ವಿಷಯದಲ್ಲಿ ಶಾಸಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.