ವಾಂತಿಚ್ಚಾಲಿನಲ್ಲಿ ಧರ್ಮಕೋಲೋತ್ಸವ ೨೧ರಂದು
ಬದಿಯಡ್ಕ: ವಾಂತಿಚ್ಚಾಲು- ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಧರ್ಮಕೋಲೋ ತ್ಸವ ಈ ತಿಂಗಳ ೨೧ರಂದು ನಡೆಯಲಿದೆ. ಅಂದು ಪ್ರಾತಃಕಾಲ ೬ ಗಂಟೆಗೆ ದೀಪ ಪ್ರತಿಷ್ಠೆ, ೬.೨೫ಕ್ಕೆ ಶ್ರೀ ದೈವದ ಬಂಡಾರ ಇಳಿಯುವುದು, ೬.೩೦ಕ್ಕೆ ಮಹಾಗಣಪತಿ ಹೋಮ, ೭.೩೦ಕ್ಕೆ ಅಷ್ಟೋತ್ತರ ಶತ ಸೀಯಾಳಾಭಿಷೇಕ, ೮ ಗಂಟೆಗೆ ಶ್ರೀ ಕಿನ್ನಿಮಾಣಿ ಪೂಮಾಣಿ ಮಹಿಳಾ ಭಜನಾ ಸಂಘ ಶೇಣಿ ಇವರಿಂದ ಭಜನೆ, ೮.೩೦ಕ್ಕೆ ಕ್ಷೀರಾಭಿಷೇಕ, ೯ಕ್ಕೆ ಕುಣಿತ ಭಜನೆ, ೯.೧೫ಕ್ಕೆ ತಂಬಿಲ, ೧೦.೩೦ಕ್ಕೆ ಶ್ರೀ ಮಂತ್ರಮೂರ್ತಿ ಗುಳಿಗ ದೈವದ ಕೋಲ ಆರಂಭ, ಶ್ರೀ ಗುಳಿಗ ದೈವಕ್ಕೆ ಬೆಳ್ಳಿಯ ತ್ರಿಶೂಲ ಸಮರ್ಪಣೆ, ೧೨.೩೦ಕ್ಕೆ ತುಲಾಭಾರ ಸೇವೆ, ಸಂಜೆ ೬ ಗಂಟೆಗೆ ದೈವದ ಭಂಡಾರ ತೆಗೆಯುವುದರೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಗಲಿದೆ.