ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ ಏರಿಕೆ
ನವದೆಹಲಿ: ಸಾರ್ವಜನಿಕ ವಲ ಯದ ತೈಲ ಮಾರುಕಟ್ಟೆ ಕಂಪೆನಿಗಳು ೧೯ ಕೆಜಿ ವಾಣಿಜ್ಯ ಧ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ಪ್ರತೀ ಯೂನಿಟ್‌ಗೆ ತಲಾ ೨೧ ರೂ.ನಂತೆ ಇಂದಿನಿಂದ ಹೆಚ್ಚಿಸಿವೆ. ಆತಿಥ್ಯ ಉದ್ಯಮಗಳು, ಹೋಟೆಲ್‌ಗಳು ಹಾಗೂ ಅಡುಗೆಗಾಗಿ ವಾಣಿಜ್ಯ ಎಲ್‌ಪಿಜಿ ಅಡುಗೆ ಗಳನ್ನೇ ಸಾಮಾನ್ಯವಾಗಿ ಅವಲಂಬಿಸಿರುವ ಬೀದಿ ಆಹಾರ ಮಾರಾಟಗಾರರಿಗೆ ಇದು ಹೆಚ್ಚಿನ ಹೊರೆ ಆಗಲಿದೆ. ಈ ಹೆಚ್ಚಳಕ್ಕೂ ಮುನ್ನ ನವೆಂಬರ್ ೧೬ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ೫೭ ರೂಪಾಯಿಗಳಷ್ಟು ಕಡಿಮೆ ಮಾಡ ಲಾಗಿತ್ತು ಎಂಬುವುದೂ ಇಲ್ಲಿ ಗಮನಾರ್ಹ. ಆದರೆ ೧೪.೨ ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕಂಪೆನಿಗಳು ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.